×
Ad

ಮುಂಬೈ: ಪಾರ್ಟಿ ಮುಗಿಸಿ ಬಂದ ಟಿಐಎಸ್ಎಸ್ ವಿದ್ಯಾರ್ಥಿ ನಿಗೂಢ ಸಾವು

Update: 2024-08-26 07:43 IST

PC: x.com/mataonline

ಮುಂಬೈ: ಇಲ್ಲಿನ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ವಿದ್ಯಾರ್ಥಿಯೊಬ್ಬ ಅಪಾರ್ಟ್ ಮೆಂಟ್ ನಲ್ಲಿ ನಿಗೂಢವಾಗಿ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಲಕ್ನೋ ಮೂಲದ ಅನುರಾಗ್ ಜೈಸ್ವಾಲ್ ವಾಸವಿದ್ದ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ಆತನ ಶವ ಪತ್ತೆಯಾಗಿದೆ. ಮಾನವ ಸಂಪನ್ಮೂಲ ಕೋರ್ಸ್ ಗೆ ಸೇರ್ಪಡೆಯಾಗಿದ್ದ ಈಗ ವಾಶಿಯಲ್ಲಿ ಹಿಂದಿನ ದಿನ ರಾತ್ರಿ ಸ್ನೇಹಿತರ ಜತೆ ಪಾರ್ಟಿಗೆ ತೆರಳಿದ್ದ. 150 ಮಂದಿ ಈ ಪಾರ್ಟಿಯಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈತ ಪಾರ್ಟಿಯಲ್ಲಿ ಹೆಚ್ಚು ಆಲ್ಕೋಹಾಲ್ ಸೇವಿಸಿದ್ದ ಎಂದು ಹೇಳಲಾಗಿದೆ. ಈತನ ರೂಮ್ ಮೇಟ್ ಗಳನ್ನು ವಿಚಾರಣೆಗೆ ಗುರಿಪಡಿಸಿರುವ ಪೊಲೀಸರು ಇದು ರ‍್ಯಾಗಿಂಗ್‌ ಪ್ರಕರಣವಾಗಿರುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಕೊಠಡಿಗೆ ಮರಳಿದ ಬಳಿಕ ಈತ ಅಸ್ವಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮರುದಿನ ಬೆಳಿಗ್ಗೆ ವಿದ್ಯಾರ್ಥಿ ಏಳದೇ ಇದ್ದಾಗ ಆತನ ಮೂವರು ಸಹಪಾಠಿಗಳು ಚೆಂಬೂರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆತ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ ಬಳಿಕ  ಲಕ್ನೋದಲ್ಲಿರುವ ವಿದ್ಯಾರ್ಥಿಯ ಕುಟುಂಬಕ್ಕೆ ಮಾಹಿತಿ ನೀಡಲಾಯಿತು.

ತಾವು ಆಗಮಿಸಿದ ಬಳಿಕವಷ್ಟೇ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಪೋಷಕರು ಮನವಿ ಮಾಡಿಕೊಂಡಿದ್ದು, ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News