×
Ad

ಸ್ವಯಂ ಘೋಷಿತ ದೇವಮಾನವನಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ಪ್ರಕರಣ ದಾಖಲು

Update: 2023-06-20 18:57 IST

ಹೈದರಾಬಾದ್: ವಿಶಾಖಪಟ್ಟಣಂನ ಆಶ್ರಮದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಪೊಲೀಸ್ ಠಾಣೆಗೆ ತೆರಳಿ ಆಶ್ರಮದಲ್ಲಿ ಪೂರ್ಣಾನಂದ ಸ್ವಾಮಿ ತನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿರುವುದಾಗಿ ದೂರು ನೀಡಿದ್ದಾಳೆ.

2016 ರಿಂದ ಆಶ್ರಮದಲ್ಲಿ ವಾಸಿಸುತ್ತಿದ್ದ ಬಾಲಕಿ ಜೂನ್ 13 ರಂದು ನಾಪತ್ತೆಯಾಗಿದ್ದಳು. ಸ್ವಾಮಿ ಪೂರ್ನಾನಂದ ನೀಡಿದ ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡು ಜೂನ್ 15 ರಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು.

ವರದಿಗಳ ಪ್ರಕಾರ, ಜ್ಞಾನಾನಂದ ರಮಾನಂದ ಸಾಧುಮಠದ ಆಶ್ರಮದಿಂದ ಅಪ್ರಾಪ್ತ ಬಾಲಕಿ ಓಡಿಹೋಗಿ ವಿಜಯವಾಡದಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿಯಾಗಿ, ತನ್ನ ವಿರುದ್ಧ ನಡೆದ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಅದೇ ಸ್ವಯಂಘೋಷಿತ ಪೂರ್ಣಾನಂದ ಸ್ವಾಮಿಯ ವಿರುದ್ಧ 2012 ರಲ್ಲಿ ಕೂಡಾ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಆರೋಪಿಯ ಕಸ್ಟಡಿಯಲ್ಲಿ ಮತ್ತೆ ಮಕ್ಕಳನ್ನು ಹೇಗೆ ಇರಿಸಲಾಗಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಪೂರ್ಣಾನಂದನ ಆಶ್ರಮದಲ್ಲಿ 12 ಮಕ್ಕಳು ವಾಸಿಸುತ್ತಿದ್ದು, ಅವರಲ್ಲಿ ನಾಲ್ವರು ಹೆಣ್ಣು ಮಕ್ಕಳು. ಅವರನ್ನು ರಕ್ಷಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಪೂರ್ಣಾನಂದ ವಿರುದ್ಧ ಹಲವು ಪ್ರಕರಣಗಳಿದ್ದು, ಭೂ ಹಗರಣದ ಆರೋಪವನ್ನೂ ಎದುರಿಸುತ್ತಿರುವುದಾಗಿ ಪೊಲೀಸರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಆಶ್ರಮದ 9.5 ಎಕರೆ ಜಾಗವೂ ವಿವಾದದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News