×
Ad

ರಾಯಚೂರು | ತುಂಡಾಗಿ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿ ಯುವಕ ಮೃತ್ಯು

Update: 2025-08-11 10:15 IST

ರಾಯಚೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ತುಳಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಗೌಡೂರು ಗ್ರಾ.ಪಂ ವ್ಯಾಪ್ತಿಯ ಹೊಸಗುಡ್ಡ ಎಂಬಲ್ಲಿ ಶನಿವಾರ ನಡೆದಿದೆ.

ಮೃತರನ್ನು ಹೊಸಗುಡ್ಡ ಗ್ರಾಮದ ನಿವಾಸಿ ಶಿವರಾಜ ನಾಯಕ (25) ಮೃತಪಟ್ಟವರು. ಆಲ್ಕೋಡ್ ಬಳಿ ಶನಿವಾರ ಮನೆಗೆ ಬಳಸಿದ್ದ ಸರ್ವಿಸ್ ವೈಯರ್ ತುಂಡಾಗಿ ಕೆಳಗೆ ಬಿದ್ದಿತ್ತು.  ಹೊಲಕ್ಕೆ ನೀರು ಬಿಡಲು ಹೋಗಿದ್ದ ವೇಳೆ ಶಿವರಾಜ ಇದನ್ನು ಗಮನಿಸದೆ ತುಳಿದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಘಟನೆಯ ಬಗ್ಗೆ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News