×
Ad

ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಖಂಡಿಸಿ ಅಂಜುಮನ್ ಕಮಿಟಿಯಿಂದ ಸಂತಾಪ

Update: 2026-03-05 12:30 IST

ರಾಯಚೂರು: ಇರಾನ್ ದೇಶದ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯನ್ನು ಖಂಡಿಸಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸುಗೂರು ತಾಲೂಕು ಕಮಿಟಿಯ ವತಿಯಿಂದ ಗಡಿಯಾರ ಚೌಕ್ ಬಳಿ ಬುಧವಾರ ರಾತ್ರಿ ಸಂತಾಪ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಮುಖಾಂಡರಾದ ಕೆಎಫ್‌ಸಿ ಮೊಹಮ್ಮದ್, ಫೈಸಲ್ ಚಾವುಸ್, ಇಬ್ರಾಹಿಂ, ಅಬ್ದುಲ್ ವಾಹಿದ್, ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಗೌರವ ಅಧ್ಯಕ್ಷರಾದ ಅನ್ಸಾರುದ್ದಿನ್, ಅಧ್ಯಕ್ಷ ಹುಸೇನ್ ಭಾಷಾ ಕೆ., ಪ್ರಧಾನ ಕಾರ್ಯದರ್ಶಿ ಅಮೀನ್ ಭಾಯಿ, ವಿವಿಧ ತಾಲೂಕು ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳಾದ ಮಹ್ಮದ್ ರಸೂಲ್, ದಾದಾಪೀರ್ ಭಾಯಿ, ರಾಜಸಾಬ್, ರಫಿ ಸಂಪಂಗಿ, ಮೌಲಾ ಭಾಯಿ, ವಸಿಂ, ಹಝ್ರತ್, ಫಾರೂಕ್, ಖಾಸಿಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News