×
Ad

ಸಿಂಧನೂರು | ಶೆಡ್ ನಲ್ಲಿ ಬೆಂಕಿ ಅವಘಡ : 700ಕ್ಕೂ ಅಧಿಕ ಕುರಿಗಳ ಸಜೀವ ದಹನ

Update: 2026-03-06 17:03 IST

ಸಿಂಧನೂರು: ಕುರಿ ಸಾಗಾಣಿಕೆ ಮಾಡುವ ಶೆಡ್ ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, 700ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ತಾಲೂಕಿನ ಮುಕ್ಕುಂದಾ ಗ್ರಾಮದ ವೈ.ಹೇಮಲತಾ ಮಧುಸೂದನ್ ರಾವ್ ಎಂಬವರು ತಮ್ಮ 5 ಎಕರೆ ಹೊಲದ 10 ಗುಂಟೆ ಜಾಗದಲ್ಲಿ ಶೆಡ್ಡು ಹಾಕಿ 700 ಕ್ಕೂ ಅಧಿಕ ಕುರಿ ಸಾಗಾಣಿಕೆ ಮಾಡಿದ್ದರು. ಶುಕ್ರವಾರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಿಗೆ ಕುರಿಗಳು ಸೇರಿದಂತೆ 4 ಲಕ್ಷ ರೂ ವೆಚ್ಚದ ಹೊಟ್ಟು, ಟ್ರಾಕ್ಟರ್ ಮತ್ತು ಇನ್ನಿತರ ಕುರಿ ಸಾಗಾಣಿಕೆಗೆ ಬೇಕಾದ ಸಾಮಾಗ್ರಿಗಳು ಸುಟ್ಟುಕರಕಲಾಗಿವೆ.

ಆಕಸ್ಮಿಕ ಬೆಂಕಿಯಿಂದ ಕುರಿಗಳು ಸಜೀವ ದಹನವಾಗಿದ್ದು, ಮಾಲಕರನ್ನ ಕಂಗಾಲಾಗಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News