ಅರಳಿಬೆಂಚಿ | ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ
ರಾಯಚೂರು : ತಾಲೂಕಿನ ಉಡುಮಗಲ್ ಖಾನಾಪುರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಅರಳಿಬೆಂಚಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಎಚ್ ಐವಿ ಆರೋಗ್ಯಾಧಿಕಾರಿ ಸೌಮ್ಯ, ನರಸಮ್ಮ ಹಾಗೂ ತಜ್ಞ ವೈದ್ಯರು ಮಾತನಾಡಿ, ಮಹಿಳೆಯರು ಮುಟ್ಟಾಗುವ ಮಧ್ಯದಲ್ಲಿ ರಕ್ತಸ್ರಾವ, ಬಿಳಿ ಮುಟ್ಟಾಗುವುದು, ಗರ್ಭಕೋಶದ ವೈರಸ್ ನಿಂದ ಮುಟ್ಟು ನಿಂತ ಬಳಿಕೆ ಮತ್ತೆ ರಕ್ತಸ್ರವಾಗುವುದು, ಇದು 35ರಿಂದ50ವರ್ಷದ ವರಿಗೆ ಗರ್ಭಕೋಶದ ಕ್ಯಾನ್ಸರ್ ಹೇಗೆ ಬರುತ್ತದೆ ಎಂದು ತಿಳಿಸಿದರು.
ಗರ್ಭಕಂಠದ ಕ್ಯಾನ್ಸರ್ 45 ವರ್ಷ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಮಗುವಿಗೆ ಎದೆ ಹಾಲುಣಿಸದೆ ಇರುವುದು 35 ವಯಸ್ಸಿನ ನಂತರ ಮದುವೆಯಾದರೆ, ಸಿಗರೇಟ್ ಸೇವನೆಯಿಂದ ಕೊಂಕಳಲ್ಲಿ ಗಂಟು ಕಟ್ಟುವುದರಿಂದ ಈ ಕ್ಯಾನ್ಸರು ಬರುತ್ತದೆ ಎಂದು ತಿಳಿ ಹೇಳಲಾಯಿತು.
ನಂತರ ಎಲ್ಲಾ ಮಹಿಳೆಯರಿಗೆ ಸಕ್ಕರೆ ಕಾಯಿಲೆ, ಮತ್ತು ಅಧಿಕ ರಕ್ತದಒತ್ತಡ ಪರೀಕ್ಷೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಶರಣಮ್ಮ, ಅಶಾ ಕಾರ್ಯಕರ್ತೆ ಭೀಮಲಮ್ಮ ಸಂಧ್ಯ, ನರಸಮ್ಮ ಭಾಗವಹಿಸಿದ್ದರು.