×
Ad

ಸನಾತನ ಹಿಂದೂ ಧರ್ಮ ಉಳಿಯುವ ಗ್ಯಾರಂಟಿ ಮೇಲೆ ಮುಂದಿನ ಚುನಾವಣೆ ನಡೆಯಲಿ: ಶಾಸಕ ಬಸನಗೌಡ ಯತ್ನಾಳ್

ʼʼಈ ದೇಶದಲ್ಲಿರಬೇಕಾದರೆ ವಂದೇ ಮಾತರಂ ಎನ್ನಬೇಕು, ಇಲ್ಲವಾದರೆ ಗಾಂಧಿ ಮಾಡಿಕೊಟ್ಟ ದೇಶಕ್ಕೆ ಹೋಗಿʼʼ

Update: 2025-09-16 23:57 IST

ರಾಯಚೂರು: ಮುಂದಿನ ಚುನಾವಣೆ ಸನಾತನ ಹಿಂದೂ ಧರ್ಮ ಉಳಿಯಬೇಕು ಎಂಬ ಒಂದೇ ಗ್ಯಾರೆಂಟಿ ಮೇಲೆ ನಡೆಯಬೇಕಿದೆ. ಸನಾತನ ಹಿಂದು ಧರ್ಮ ಉಳಿಯಬೇಕು. ದಬ್ಬಾಳಿಕೆ ದೌರ್ಜನ್ಯದಿಂದ ಸನಾತನ ಹಿಂದು ಧರ್ಮ ಎದ್ದು ನಿಂತಿದೆ ಎನ್ನುದಕ್ಕೆ ಇಲ್ಲಿ‌ ನೆರೆದ ಯುವಕರೇ ಸಾಕ್ಷಿ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ತಿಳಿಸಿದರು.

ಹಿಂದೂ ಗಣಪ ವಿಸರ್ಜನೆಯ ಶೋಭಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನೇನು ಜಾದು ಮಾಡಿಲ್ಲ. ಡಾಬಾದಲ್ಲಿ ಊಟ ಮಾಡಿಸಿಲ್ಲ. ಗಾಡಿಗೆ ಪೆಟ್ರೊಲ್ ಹಾಕಿಸಿಲ್ಲ. ಹಿಂದುತ್ವದ ಜತೆಗೆ ಅಭಿವೃದ್ಧಿ ಆಗಬೇಕಿದೆ. ಗಣಪತಿ ಹಬ್ಬಕ್ಕೆ ಅನುಮತಿಗಾಗಿ ಎಲ್ಲಿಯೂ ಅಲೆಯಬಾರದತಂಹ ಸರಕಾರ ಬರಬೇಕು. ಅಧಿಕಾರಿಗಳೇ ನೀವದ್ದಲ್ಲಿಗೆ ಬರಬೇಕು. ಗಣೇಶ ಉತ್ಸವ, ನವರಾತ್ರಿ ರಾಷ್ಟ್ರೀಯ ಉತ್ಸವಗಳಾಗಬೇಕು ಎಂದು ಹೇಳಿದರು.

ಈದ್ ಮಿಲಾದ್ ವೇಳೆ ಎಲ್ಲಿಯಾದರೂ ಒಂದೇ ಒಂದು ಕಲ್ಲು ಬಿದ್ದಿದೆಯಾ. ಆದರೆ, ನೀವು ಯಾಕೆ ನಮ್ಮ ಗಣೇಶನ ವೇಳೆ ಕಲ್ಲು ಎಸೆಯುತ್ತಿರಿ. ಸನಾತನ ಧರ್ಮದ ಯಾವುದೇ ಹೆಣ್ಣು ಮಗಳಿಗೆ ಚಾಮುಂಡಿಗೆ ಪೂಜಿಸುವ ಅಧಿಕಾರವಿದೆ. ಆದರೆ, ಭುವನೇಶ್ಚರಿ ಬಗ್ಗೆ ನಂಬಿಕೆ ಇಲ್ಲದೆ, ನಮ್ಮ ಧರ್ಮದ ಬಗ್ಗೆ ನಂಬಿಕೆ ಇಲ್ಲದವರಿಗೆ ಚಾಮುಂಡಿ ಪೂಜಿಸುವ ಹಕ್ಕಿದೆಯಾ?” ಎಂದು ಪ್ರಶ್ನಿಸಿದರು.

“ನಾನು ಅಂಬೇಡ್ಕರ್ ಕಟ್ಟಾ ಅಭಿಮಾನಿ, ಅವರ ತತ್ವ ಸಿದ್ಧಾಂತ ನಂಬುತ್ತೇನೆ. ಆದರೆ, ಅವರ ಅಂತ್ಯಕ್ರಿಯೆಗೆ ಕಾಂಗ್ರೆಸ್ ದಿಲ್ಲಿಯಲ್ಲಿ ಜಾಗ ಕೊಡಲಿಲ್ಲ. ಆದರೆ, ಪಂಚತೀರ್ಥ ಮಾಡಿ ಅವರಿಗೆ ಗೌರವಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರು. ನನ್ನ ವಿರುದ್ಧ ದಲಿತರನ್ನು ಎತ್ತಿಕಟ್ಟುವ ನಾಟಕ ನಡೆಯುವುದಿಲ್ಲ. ಈ ದೇಶದಲ್ಲಿರಬೇಕಾದರೆ ವಂದೇ ಮಾತರಂ ಎನ್ನಬೇಕು, ಇಲ್ಲವಾದರೆ ಗಾಂಧಿ ಮಾಡಿಕೊಟ್ಟ ದೇಶಕ್ಕೆ ಹೋಗಿ ಎಂದು ಹೇಳಿದರು.

“ಹಿಂದುಗಳ ಪರ ವಿಧಾನಸಭೆಯಲ್ಲಿ ಮಾತನಾಡುವವರು ಯಾರು ಇಲ್ಲ. ಡಿಜೆ ಇಡಲು ಪರವಾನಗಿ ಇಲ್ಲವಂತೆ. ಉಳಿದವರು ಎಷ್ಟು ಕೂಗಾಡಿದರೂ ತೊಂದರೆ ಇಲ್ಲ. ನಮಗೆ ದಿನಕ್ಕೆ ಐದು ಬಾರಿ ತೊಂದರೆ ಆಗುತ್ತಿದೆಯಲ್ಲ. ಮದ್ದೂರಿನಲ್ಲಿ ಬಿಜೆಪಿ, ಬಜರಂಗದಳ, ವಿಎಚ್ ಪಿ ಸ್ಟಾಂಗ್ ಇಲ್ಲ. ಈಗ ಯುವಕರು ಎದ್ದು ಬಂದಿದ್ದಾರೆ. ಅಪ್ಪ ಮಕ್ಕಳ ನಾಟಕ ಕಂಪನಿ ಸಾಕಾಗಿದೆ. ಹಿಂದುಗಳ ರಕ್ಷಣೆ ಆಗಬೇಕು” ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ, ವಿಜಯೇಂದ್ರರನ್ನು ಕಾಲೆಳೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News