×
Ad

ಭಗತ್ ಸಿಂಗ್ ವಿಚಾರಗಳು ಇಂದಿಗೂ ಸ್ಫೂರ್ತಿ : ಚನ್ನಬಸವ ಜಾನೇಕಲ್

ರಾಯಚೂರಿನಲ್ಲಿ ಭಗತ್ ಸಿಂಗ್ ಅವರ 118ನೇ ಜನ್ಮದಿನಾಚರಣೆ

Update: 2025-09-28 12:36 IST

ರಾಯಚೂರು: ಎಲ್ಲ ಮಾನವರು ಸಮಾನರು, ದುಡಿಮೆಗೆ ಗೌರವ ಕೊಡಬೇಕೆಂಬ ಮನೋಭಾವ ಬೆಳೆಸಿಕೊಳ್ಳಲು ಭಗತ್ ಸಿಂಗ್ ವಿಚಾರಗಳು ಸ್ಫೂರ್ತಿ ನೀಡುತ್ತವೆ ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಅಭಿಪ್ರಾಯಪಟ್ಟರು.

ನಗರದ ಶಹೀದ್ ಭಗತ್ ಸಿಂಗ್ ವೃತ್ತದಲ್ಲಿ ಶನಿವಾರ ಎಐಡಿಎಸ್ಒ, ಎಐಡಿವೈಒ ಮತ್ತು ಎಐಐಎಂಎಸ್ಎಸ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭಗತ್ ಸಿಂಗ್ ಅವರ 118ನೇ ಜನ್ಮದಿನಾಚರಣೆ ನಡೆಯಿತು.

ಚನ್ನಬಸವ ಜಾನೇಕಲ್ ಅವರು ಮಾತನಾಡಿ, ಬಾಲ್ಯದಲ್ಲಿಯೇ ಜಲಿಯನ್‌ ವಾಲಾಬಾಗ್ ಹತ್ಯಾಕಾಂಡದ ಪರಿಣಾಮದಿಂದ ಪ್ರೇರಿತರಾಗಿ ಭಗತ್ ಸಿಂಗ್ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಂಕಲ್ಪ ತೊಟ್ಟರು ಎಂದು ನೆನಪಿಸಿದರು. ಸಾಹಿತ್ಯ, ಕಲೆ, ತತ್ವಶಾಸ್ತ್ರ, ವಿಜ್ಞಾನ ಮತ್ತು ಇತಿಹಾಸದಲ್ಲಿ ಆಳವಾದ ಜ್ಞಾನ ಹೊಂದಿದ್ದ ಭಗತ್ ಸಿಂಗ್ ಸಮಾಜವಾದಿ ಕ್ರಾಂತಿಯನ್ನು ಕನಸು ಕಂಡಿದ್ದರು ಎಂದರು.

ಅವರು caste-communal politics ಖಂಡಿಸಿ, ಮಾನವೀಯತೆಯಿಂದ ಬದುಕುವ ಸಮಾಜದ ಕನಸು ಹೊತ್ತಿದ್ದರು ಎಂದು ಹೇಳಿದರು.

ಎಐಡಿಎಸ್ಒ ಜಿಲ್ಲಾಧ್ಯಕ್ಷ ಹಯ್ಯಾಳಪ್ಪ ಮಾತನಾಡಿ, ಶಿಕ್ಷಣದ ವ್ಯಾಪಾರೀಕರಣ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಹೋರಾಡಲು ಭಗತ್ ಸಿಂಗ್ ಆದರ್ಶ ಅಗತ್ಯ ಎಂದರು.

ಕಾರ್ಯಕ್ರಮವನ್ನು ಎಐಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಸರೋಜಾ ಗೋವಾರ್ ನಡೆಸಿಕೊಟ್ಟರು. ಎಐಯುಟಿವಯುಸಿ ಜಿಲ್ಲಾ ಉಪಾಧ್ಯಕ್ಷ ಅಣ್ಣಪ್ಪ ಮತ್ತು ಕಾರ್ಯದರ್ಶಿ ಮಹೇಶ್ ಚೀಕಲಪರವಿ ಭಗತ್ ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಸವರಾಜ್, ನಂದಗೋಪಾಲ್, ಶ್ರೀಕಾಂತ್, ಮೌನೇಶ್, ನೂರ್ ಪಾಷ, ಕೃಷ್ಣ ಮನ್ಸಲಾಪುರ, ನಾಗವೇಣಿ, ರಾಜೇಶ್, ಮಲ್ಲನಗೌಡ ಸೇರಿದಂತೆ ಅನೇಕರು ಭಾಗವಹಿಸಿ ಗೌರವ ಸಲ್ಲಿಸಿದರು.

ಇದೇ ವೇಳೆ, ಮನಸಲಾಪುರ, ಉಂಡ್ರಾಳದೊಡ್ಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಎಐಡಿವೈಒ ಘಟಕಗಳ ನೇತೃತ್ವದಲ್ಲಿ ಭಗತ್ ಸಿಂಗ್ ಜನ್ಮದಿನ ಆಚರಿಸಲಾಯಿತು. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಮಧ್ಯೆಯೂ ಹಬ್ಬವನ್ನು ಆಚರಿಸಲಾಯಿತು.

ಗ್ರಾಮ ಘಟಕದ ನಾಯಕರು ಹಾಗೂ ಯುವಕರು ಭಗತ್ ಸಿಂಗ್ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News