×
Ad

ರಸ್ತೆ ಬದಿಯ ಮಣ್ಣಿನ ರಾಶಿಗೆ ಬೈಕ್ ಢಿಕ್ಕಿ; ಸವಾರ ಮೃತ್ಯು, ಇಬ್ಬರಿಗೆ ಗಾಯ

Update: 2025-06-08 14:29 IST

ರಾಯಚೂರು: ರಸ್ತೆ ಬದಿ ಹಾಕಿದ ಮಣ್ಣಿನ ರಾಶಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಮಸ್ಕಿ ತಾಲ್ಲೂಕಿನ ಇ ಜೆ ಬಸಾಪುರ ಕ್ಯಾಂಪ್ ಬಳಿ ಶನಿವಾರ ನಡೆದಿದೆ.

ಬೈಕ್ ಸವಾರ ಗಿರೀಶ(26) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ.  ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ರಾಜಾ ಎಂಬವರನ್ನು ಬಳ್ಳಾರಿ ಆಸ್ಪತ್ರೆಗೆ ಹಾಗೂ ಅಕ್ಬರ್ ಎಂಬವರನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ತುರ್ವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News