ಚಿಕ್ಕಸೂಗೂರು | ಶ್ರೀ ಸಿದ್ದರಾಮೇಶ್ವರ ಸಿಬಿಎಸ್‌ಸಿ ಶಾಲೆಗೆ ಶೇ.100 ಫಲಿತಾಂಶ
Update: 2025-05-14 16:30 IST
ರಾಯಚೂರು : ತಾಲೂಕಿನ ಚಿಕ್ಕಸೂಗೂರಿನ ಚೌಕಿ ಮಠದ ಶ್ರೀ ಸಿದ್ದರಾಮೇಶ್ವರ ಸಿಬಿಎಸ್‌ಸಿ ಪಬ್ಲಿಕ್ ಶಾಲೆಯು 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.
ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ದಿವ್ಯ ಶೇ.77, ಅಪೇಕ್ಷ ಶೇ.75 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 2 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಹಾಗೂ 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಸಂಸ್ಥಾಪಕರಾದ ಚೌಕಿಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಶಾಲೆಯ ವ್ಯವಸ್ಥಾಪಕರಾದ ಜಗನ್ನಾಥ ಕುಲಕರ್ಣಿ ಕಲ್ಮಾಲಾ ಹಾಗೂ ಶಿಕ್ಷಕ ವೃಂದ. ಈ ವಿದ್ಯಾರ್ಥಿಗಳ ಸಾಧನೆಗೆ ಶುಭ ಹಾರೈಸಿದ್ದಾರೆ.