×
Ad

ಡಿ.ಯದ್ಲಾಪುರ ಗ್ರಾಮ ಪಂಚಾಯಿತಿಯಿಂದ ಸ್ಮಶಾನ ಕಾರ್ಮಿಕರಿಗೆ ಸಾಮಗ್ರಿ ವಿತರಣೆ

Update: 2025-11-20 13:39 IST

ರಾಯಚೂರು: ತಾಲೂಕಿನ ಡಿ.ಯದ್ಲಾಪೂರು ಗ್ರಾಮ ಪಂಚಾಯಿತಿಯಿಂದ ಮಸಣ ಕಾರ್ಮಿಕರಿಗೆ ಸಾಮಗ್ರಿಗಳ ವಿತರಣೆ ಮಾಡಲಾಯಿತು.

ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಬೇಡಿಕೆಯಂತೆ ಇಂದು ರಾಯಚೂರು ತಾಲ್ಲೂಕಿನ ಯದ್ಲಾಪೂರ್ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಯದ್ಲಾಪೂರ್, ಗಂಜಹಳ್ಳಿ, ಹೆಗ್ಗಸನಹಳ್ಳಿ, ಹನುಮಾನ ದೊಡ್ಡಿ, ವಡ್ಲೋರು ಗ್ರಾಮಗಳ ಮಸಣ ಕಾರ್ಮಿಕರಿಗೆ ಗ್ರಾಮ ಪಂಚಾಯತ್ ಸ್ವಂತ ಅನುದಾನದಲ್ಲಿ ಗುಣಿ ತೋಡಲಿಕ್ಕೆ ಬೇಕಾದ ಸಾಮಾಗ್ರಿಗಳು ಮತ್ತು ಹಲಿಗೆ ಬಾರಿಸುವವರಿಗೆ ಹಲಿಗೆ ಹಾಗೂ ಅವರ ಸುರಕ್ಷತೆ ಗಾಗಿ ಕೈ ಗ್ಲೌಜ್ ಬೂಟ್ ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಮ್ಮ, ವಡ್ಲೋರು ಉಪಾಧ್ಯಕ್ಷೆ ಪಾರ್ವತಮ್ಮ, ಗಂಜಹಳ್ಳಿ ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಚೆನ್ನಮ್ಮ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕರಾದ ಕೆ.ಜಿ.ವಿರೇಶ‌ ಮತ್ತು ಪಂಚಾಯತ್ ಮಟ್ಟದ ಸಮಿತಿಯ ಅಧ್ಯಕ್ಷ‌ ರಾಮಪ್ಪ ಹೆಗ್ಗಸನಹಳ್ಳಿ, ಕಾರ್ಯದರ್ಶಿ ಮುದ್ದಪ್ಪ ಯದ್ಲಾಪೂರ್ ಸೇರಿದಂತೆ ಎಲ್ಲಾ ಗ್ರಾಮಗಳ ಸ್ಮಶಾನ  ಕಾರ್ಮಿಕರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News