×
Ad

ರಾಯಚೂರು | ಜೆಸ್ಕಾಂ ನೌಕರ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿ: ಆರೋಪ

Update: 2025-10-18 22:54 IST

ರಾಯಚೂರು: ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪೆನಿ( ಜೆಸ್ಕಾಂ) ನೌಕರ ವೀರನಗೌಡ ಆರೆಸ್ಸೆಸ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಸರಕಾರದ ವಿರುದ್ಧ ಸ್ಟೇಟಸ್ ಹಾಕಿರುವುದಾಗಿ ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಜಗ್ಲಿ ಆರೋಪಿಸಿದ್ದಾರೆ.

ಈ ಸಂಬಂದ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಅಭಿಯಂತರರಿಗೆ ದೂರು ನೀಡಿದ ಅವರು, ಆರೆಸ್ಸೆಸ್‌ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಜೆಸ್ಕಾಂ ಶಕ್ತಿನಗರದ ಉಪವಿಭಾಗದ ಮೀಟರ್ ರೀಡರ್ ವೀರನಗೌಡ ಸಂಘದ ಸಮವಸ್ತ್ರ ಧರಿಸಿ ಕೈಯಲ್ಲಿ ಲಾಟಿ ಹಿಡಿದು ಭಾಗಿಯಾಗಿದ್ದು, ಕೂಡಲೇ ಆತನನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

‘ಸಂಘವನ್ನು ನಿಷೇಧಿಸುತ್ತೇವೆ ಅಂದವರು ಮಣ್ಣಲ್ಲಿ ಮಣ್ಣಾಗಿ ಹೋದರು... ಸಂಘ ಮಾತ್ರ ತನ್ನದೇ ಕೆಲಸ ಮಾಡುತ್ತಾ ಯಶಸ್ವಿಯಾಗಿ ನೂರು ವರ್ಷ ಪೂರೈಸಿದೆ’ ಎಂದು ವೀರನಗೌಡ ಸರಕಾರವನ್ನು ಟೀಕಿಸಿ ಸ್ಟೇಟಸ್ ಹಾಕಿಕೊಂಡಿರುವುದಾಗಿ ಶಿವಕುಮಾರ ಜಗ್ಲಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News