×
Ad

ಮಾನ್ವಿಯಲ್ಲಿ ನಡೆಯುವ ಆರೋಗ್ಯ ಮೇಳದ ಕುರಿತು ಆರೋಗ್ಯ ಇಲಾಖೆಯಿಂದ ಜಾಗೃತಿ

Update: 2025-03-11 17:23 IST

ಸಿರವಾರ : ತಾಲೂಕಿನ ಹಳ್ಳಿ ಹೊಸೂರುನ ವ್ಯಾಪ್ತಿಯ ಜಾಲಾಪುರು ಕ್ಯಾಂಪ್ ಹಾಗೂ ಸರಕಾರಿ ಬಾಲಕರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ, ಮಸೀದಿ ಚರ್ಚ್ ಹಾಗೂ ಬಸ್ ನಿಲ್ದಾಣದಲ್ಲಿ ಆರೋಗ್ಯ ಮೇಳದ ಕುರಿತು ಮಾನ್ವಿ ಪಟ್ಟಣದಲ್ಲಿ ನಡೆಯುವ ಆರೋಗ್ಯ ಮೇಳದ ಕುರಿತು ಜಾಗೃತಿ ಮೂಡಿಸಲಾಯಿತು.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿವಿಧ ಸಂಘ ಸಂಸ್ಥೆಗಳು, ವಿವಿಧ ಆಸ್ಪತ್ರೆಗಳು ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಾನ್ವಿ ನಗರದ ಬಾಷುಮಿಯ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾ.15 ರಂದು ಬೃಹತ್ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಆರೋಗ್ಯ ಮೇಳದಲ್ಲಿ ಹೃದಯ ತಜ್ಞರು, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಎಲುಬು ಮತ್ತು ಕಿಲು ತಜ್ಞರು, ವೈದ್ಯಕೀಯ ತಜ್ಞರು, ಕ್ಯಾನ್ಸರ್ ರೋಗ ತಜ್ಞರು, ಮಾನಸಿಕ ರೋಗ ತಜ್ಞರು, ನರರೋಗ ಚಿಕಿತ್ಸೆ ತಜ್ಞರು, ಮೂತ್ರಪಿಂಡ ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ನೇತ್ರಾ ತಜ್ಞರು, ಚರ್ಮರೋಗ ತಜ್ಞರು ಸೇರಿದಂತೆ ಭಾರತೀಯ ಪದ್ಧತಿಯ ಸೇವೆಗಳ ತಜ್ಞರು, ಶ್ವಾಸಕೋಶ ತಜ್ಞರು, ಲಭ್ಯವಿದ್ದು ಸಾರ್ವಜನಿಕರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಉಚಿತ ಆರೋಗ್ಯ ಸೇವೆಗಳ ಜೊತೆಗೆ ಉಚಿತ ಪ್ರಯೋಗಾಲಯ ಪರೀಕ್ಷೆ, ಉಚಿತ ಔಷಧಿ ವಿತರಣೆ, ಕ್ಷಯರೋಗ ಪರೀಕ್ಷೆ, ಯೋಗ ಮತ್ತು ಧ್ಯಾನ, ರಕ್ತದಾನ ಶಿಬಿರ, ಅಂಗಾಂಗಗಳ ದಾನ ನೋಂದಣಿ, ಆಭಾ ಕಾರ್ಡ್, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್ ಪರೀಕ್ಷೆ, ನೇತ್ರದಾನ ನೋಂದಣಿ ಕುರಿತು ಮಾಹಿತಿ ಹಾಗೂ ಆರೋಗ್ಯ ಸೇವೆಗಳು ಲಭ್ಯವಿರುತ್ತವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮೀ ಮುಂಡಾಸ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ದೇವದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರ ಸುರಕ್ಷಣಾಧಿಕಾರಿ ಚಿತ್ರ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News