×
Ad

ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ಸಿ.ಎಂ ಗೆ ಪತ್ರ: ಕಾನೂನು ಸಚಿವ ಎಚ್ ಕೆ ಪಾಟೀಲ್

Update: 2025-06-21 12:21 IST

ರಾಯಚೂರು: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತಂತೆ 12 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದರು ಕೂಡ ಅದರಲ್ಲಿ ಕೇವಲ ಶೇಕಡಾ 7 ತನಿಖೆಯಾಗುತ್ತಿವೆ. 7 ರಲ್ಲಿ 2% ಅಂದ್ರೆ ಒಟ್ಟು ಪ್ರಕರಣದಲ್ಲಿ 0.2% ತೀರ್ಪು ಬಂದಿವೆ. ತಾರ್ಕಿಕ ಅಂತ್ಯ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ರಾಯಚೂರಿನ ಕೃಷಿ ವಿವಿಯಲ್ಲಿ ಆಯೋಜಿಸಲಾಗಿದ್ದ ಸಚಿವ ಎನ್.ಎಸ್.ಬೋಸರಾಜು ಹುಟ್ಟುಹಬ್ಬ ಹಿನ್ನೆಲೆ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಗೆ ಅವರು ಮಾತನಾಡಿದರು.

ಸಿಬಿಐಗೆ 9 ಪ್ರಕರಣ ವಹಿಸಿದ್ದೇವೆ. ಅದರಲ್ಲಿ 3 ಪ್ರಕರಣ ಬಿಟ್ಟು 6 ಪ್ರಕರಣ ನಾವು ಮಾಡಲ್ಲ ಅಂತ ಕಳುಹಿಸಿದ್ದಾರೆ. ಎಸ್ ಐಟಿ ನಲ್ಲಿ ಬಹುಭಾಗ ಪ್ರಕರಣಗಳು ತನಿಖೆಯಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸುವ ಉದ್ದೇಶದಿಂದ ಸಿಎಂಗೆ ಪತ್ರ ಬರೆದಿದ್ದೇನೆ. ರಾಜ್ಯದ, ನಮ್ಮ ಜನರ ಹಿತದೃಷ್ಟಿಯಿಂದ ಬರೆದಿರುವ ಪತ್ರವನ್ನು ಸಿಎಂ ಗೆ ಈಗಾಗಲೇ ತೋರಿಸಿದ್ದೇನೆ ಅವರು ಗಂಭೀರವಾಗಿ ತೆಗೆದುಕೊಳ್ತಾರೆ ಎಂದರು.


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News