ಲಿಂಗಸುಗೂರು | ಕಾಲುವೆಗೆ ಬಿದ್ದ ವ್ಯಕ್ತಿಯ ಮೃತದೇಹ ಪತ್ತೆ
Update: 2025-09-03 20:20 IST
ಲಿಂಗಸುಗೂರು: ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದ ನಾರಾಯಣಪುರ ಬಲದಂಡೆ ಕಾಲುವೆಗೆ ವ್ಯಕ್ತಿಯೊರ್ವ ಕಾಲು ಜಾರಿ ಬಿದ್ದ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಬುಧವಾರ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಚಿಕ್ಕ ಉಪ್ಪೇರಿ ಗ್ರಾಮದ ಈರಪ್ಪ ಭಂಗಿ (38) ಎಂದು ಗುರುತಿಸಲಾಗಿದೆ.
ಕಾಲುವೆಗೆ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಮೃತದೇಹ ಪತ್ತೆಯಾಗಿದೆ.
ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ವಿರಯ್ಯ ಅಂಗಡಿ, ಸಿಬ್ಬಂದಿಗಳಾದ ಭೀಮನಗೌಡ, ಅಮರಯ್ಯ, ಅಶೋಕ, ಶಿವಬಸವ , ತಮ್ಮಣ್ಣ, ಮೌನೇಶ, ಹುಲಗಪ್ಪ ಇದ್ದರು.