×
Ad

ಲಿಂಗಸುಗೂರು | ಚಿನ್ನದ ಗಣಿ ಕಾರ್ಮಿಕ ಆರೆಸ್ಸೆಸ್‌ ಪಥ ಸಂಚಲನದಲ್ಲಿ ಭಾಗಿ : ಕ್ರಮಕ್ಕೆ ಆಗ್ರಹ

Update: 2025-10-20 17:33 IST

ಲಿಂಗಸುಗೂರು: ಅ.12ರಂದು ಲಿಂಗಸುಗೂರಿನಲ್ಲಿ ನಡೆದ ಆರೆಸ್ಸೆಸ್‌ ಪಥಸಂಚಲನದಲ್ಲಿ ಶಾಸಕ ಮಾನಪ್ಪ ವಜ್ಜಲ್ ಅವರ ಆಪ್ತ ಸಹಾಯಕ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ ಕುಮಾರ್ ಅಮಾನತು ಮಾಡಿದ ಬೆನ್ನಲ್ಲೇ ಸರ್ಕಾರದ ಅಧೀನದಲ್ಲಿರುವ ಹಟ್ಟಿ ಚಿನ್ನದ ಗಣಿಯ ಕಾರ್ಮಿಕ ಅಮರೇಶ್ ಕೆ. ಕೂಡಾ ಶತಾಬ್ದಿ ಪಥಸಂಚಲನದಲ್ಲಿ ಆರೆಸ್ಸೆಸ್‌ ಗಣವೇಶ ಧರಿಸಿ ಭಾಗಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಹಟ್ಟಿ ಚಿನ್ನದ ಗಣಿ ದೇಶದಲ್ಲಿ ಏಕೈಕ ಚಿನ್ನ ಉತ್ಪಾದಿಸುವ ಸರ್ಕಾರಿ ಸಂಸ್ಥೆಯಾಗಿದ್ದು, ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಸರ್ಕಾರಿ ನೌಕರರಂತೆ ನಿಯಮಗಳು ಅನ್ವಯವಾಗುತ್ತವೆ. ಈ ಹಿನ್ನೆಲೆಯಲ್ಲಿ ಅಮರೇಶ್ ಅವರ ಪಥಸಂಚಲನ ಪಾಲ್ಗೊಳ್ಳುವಿಕೆ ನಿಯಮ ಉಲ್ಲಂಘನೆಗೆ ಸಮಾನ ಎಂದು ಸಾರ್ವಜನಿಕರು ಹಾಗೂ ಗಣಿ ಕಾರ್ಮಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರವೀಣ ಕುಮಾರ್ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದರೆ, ಅದೇ ರೀತಿಯಾಗಿ ಅಮರೇಶ್ ಮೇಲೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯವ್ಯಕ್ತವಾಗಿದೆ. ಸರ್ಕಾರಿ ನೌಕರರಿಗೆ ಯಾವುದೇ ಧಾರ್ಮಿಕ ಅಥವಾ ಸಂಪ್ರದಾಯಕ ಸಂಘಟನೆಯ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶವಿಲ್ಲದಿದ್ದರೂ, ಈ ನಿಯಮವನ್ನು ಗಾಳಿಗೆ ತೂರಿ ಚಿನ್ನದ ಗಣಿ ಕಾರ್ಮಿಕ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.

ಹಟ್ಟಿ ಚಿನ್ನದ ಗಣಿಯ ಅಧಿಕಾರಿಗಳು ಅಮರೇಶ್ ಕೆ. ಭೂ ಕೆಳಮೈಯ ವಿಭಾಗದ ಕಾರ್ಮಿಕನಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಣಿ ನೌಕರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News