ಲಿಂಗಸೂಗೂರು | ನಾಗಲಾಪುರ ಗ್ರಾಮ ಪಂಚಾಯತ್‌ಗೆ ಗ್ರಾಮಸ್ಥರಿಂದ ಮುತ್ತಿಗೆ
ಲಿಂಗಸೂಗೂರು : ತಾಲ್ಲೂಕಿನ ನಾಗಲಾಪುರ ಗ್ರಾಮದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆರು ದಿನಗಳಿಂದ ಕೆಲಸಕ್ಕೆ ಗೈರು ಹಾಜರಾಗಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿದ ಗಟನೆ ನಡೆದಿದೆ.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ಮೇ 14ರಿಂದ ಪಿಡಿಓ ಕಚೇರಿಗೆ ಬಂದಿಲ್ಲ. ಅನಧಿಕೃತವಾಗಿ ವಾರಗಳಿಂದ ಗೈರುಹಾಜರಾಗಿದ್ದು, ಕುಡಿಯುವ ನೀರು ಪೂರೈಕೆ ಅಸ್ತವ್ಯಸ್ತಗೊಂಡಿದೆ. ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ, ಬೀದಿದೀಪಗಳೂ ಇಲ್ಲ. ಜನರಿಗೆ ಉದ್ಯೋಗ ಇಲ್ಲ ಎಂದು ಆರೋಪಿಸಿದರು.
ಪಿಡಿಓ ಅವರನ್ನು ಕೇಳಿದರೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದ ಅವರು, ಕಚೇರಿಗೆ ಬಾರದೆ ಗೈರು ಹಾಜರಾಗಿದ್ದರೂ, ಪಿಡಿಓ ಮನೆಯಿಂದ ದಾಖಲೆಗಳಿಗೆ ಸಹಿ ಮಾಡಿ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಕೆಲಸ ಕೇಳಿದರೆ ನನಗೂ ನರೇಗಾ ಕೆಲಸಕ್ಕೂ ಸಂಬಂಧವಿಲ್ಲ, ನಾನು ಹೇಳಿದಂತೆ ಕೇಳಬೇಕು. ನೀವು ಹೇಳಿದಂತೆ ನಾನು ಕೇಳಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.