×
Ad

ಮಾನ್ವಿ | ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಮೃತ್ಯು : ಶಂಕೆ

Update: 2025-07-14 22:27 IST

ಮಾನ್ವಿ : ತಾಲೂಕಿನ ರಬ್ಬಣಕಲ್ ಗ್ರಾಮದ ಹೊರವಲಯದಲ್ಲಿರುವ ರೈತರೊಬ್ಬರ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಮಾನ್ವಿ ಪಟ್ಟಣದ ನಿವಾಸಿ ನಾಗರಾಜ್ (23) ಎಂಬ ಯುವಕ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಯುವಕನ ಮೃತದೇಹವನ್ನು ಹೊರತೆಗೆಯಲು ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಮಾನ್ವಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಎಂ.ಎಫ್. ಡಿಸೋಜ ನೇತೃತ್ವದ ತಂಡವು ಕೃಷಿ ಹೊಂಡದಲ್ಲಿ ಕಾರ್ಯಚರಣೆ ನಡೆಸುತ್ತಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹಂಪಯ್ಯನಾಯಕ ಅವರು, ಜಿಲ್ಲಾಮಟ್ಟದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರನ್ನು ಕರೆಸಿ ಆದಷ್ಟು ಬೇಗ ಪತ್ತೆ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ಧಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News