×
Ad

ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ: ಕವಿಗೋಷ್ಠಿ

Update: 2025-06-06 16:11 IST

ರಾಯಚೂರು : ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ಪ್ರಯುಕ್ತ ಮುನ್ನೂರು ಕಾಪು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಾಹಿತಿ ಹಾಗೂ ಕವಿಗಳ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುನ್ನೂರು ಕಾಪು ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಭಗತರಾಜ್ ನಿಜಮಕಾರ್ ಅವರು ಹೇಳಿದರು.

ಅವರಿಂದು ನಗರದ ಶ್ರೀ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಮುನ್ನೂರು ಕಾಪು ಸಮಾಜದ ಆಯೋಜಿತ ವಿಶೇಷ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ಕೃಷ್ಣದೇವರಾಯ ಅವರ ನೇತೃತ್ವದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು 10 ದಿನಗಳ ಕಾಲ ಆಯೋಜಿಸಲಾಗಿತ್ತು. ಆದರೆ ಶ್ರೀ ಕೃಷ್ಣದೇವರಾಯ ವಂಶಸ್ಥರಾದ ಮುನ್ನೂರು ಕಾಪು ಸಮಾಜ ಕಾರಹುಣ್ಣಿಮೆ ಅಂಗವಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ವೈವಿದ್ಯಮ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಯೋಜನೆ ಮಾಡುವ ಮೂಲಕ ಈ ಅತ್ಯಂತ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಎ.ಪಾಪಾರೆಡ್ಡಿ ಅವರು 25ನೇ ವರ್ಷದ ಬೆಳ್ಳಿ ಅಂಗವಾಗಿ ವಿಶೇಷವಾಗಿ ಮುಂಗಾರು ಕವಿಗೋಷ್ಠಿಯನ್ನು ಆಯೋಜನೆ ಮಾಡುವ ಮೂಲಕ ಸಾಹಿತ್ಯಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಹಿತ್ಯ ಲೋಕಕ್ಕೆ ಮುಂಗಾರು ಹಬ್ಬ ಮೆರಗು ತಂದಿದೆ ಎಂದರು.

ರೈತರನ್ನು ಕೃಷಿಯಲ್ಲಿ ಪರಿಚಯ ಮಾಡಿದ್ದೂ ಬಂಡಾಯ ಸಾಹಿತ್ಯ ನಂತರ ರೈತರ ಹಬ್ಬವಾದ ಮುಂಗಾರು ಹಬ್ಬ ಜಿಲ್ಲೆಯ ಸಾಹಿತ್ಯಗಳನ್ನು ಗುರುತಿಸಿರುವುದು ಹೆಮ್ಮೆಯ ಸಂಗತಿ. ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ನಡೆಯುವ ಈ ಮುಂಗಾರು ಹಬ್ಬ ಎಲ್ಲಾ ಸಮಾಜದವರನ್ನು ವೇದಿಕೆ ಗುರುತಿಸುವಂತೆ ಮಾಡುತ್ತಿರುವುದು ಇದು ಮುನ್ನೂರು ಕಾಪು ಸಮಾಜದ ಪ್ರಭಲ್ಯ ಪ್ರದರ್ಶಿಸುತ್ತಿದೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಉಳಿಸುವ ಕಾರ್ಯ ಮುಂಗಾರು ಸಮಾಜ ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಲ್ಯಾಣ ಸತ್ಯ ಸಂಪಾದಕರಾದ ಕೆ.ಸತ್ಯನಾರಾಯಣ ಅವರು ಪ್ರಾಸ್ತವಿಕ ಮಾತನಾಡಿ, ಕಳೆದ 25 ವರ್ಷಗಳಿಂದ ನಿರಂತರವಾಗಿ ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಮತ್ತು ಪಾರಂಪರಿಕ ಕಾರು ಹುಣ್ಣಿಮೆ ಅಂಗವಾಗಿ ಮುಂಗಾರು ಸಾಂಸ್ಕೃತಿಕ ರಾಯಚೂರ ಹಬ್ಬ ಆಯೋಜಿಸುತ್ತ ಬಂದಿದೆ ಎಂದರು.

ಮುಂಗಾರು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತ್ಯಗಳು ಹಾಗೂ ಕವಿಗಳು ತಮ್ಮ ಅನಿಸಿಕೆಗಳನ್ನು ಪ್ರಸ್ತುತ ಪಡಿಸಿದರು.

ಮುರಳೀಧರ ಕುಲಕರ್ಣಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ಈ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು ಹಾಗೂ ಹಬ್ಬದ ರೂವಾರಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ವೆಂಕಟರಾವ್ ಕುಲಕರ್ಣಿ,ವೆಂಕಟೇಶ ಬೇವಿನಬೆಂಚಿ, ಉಟುಕೂರು ಕೃಷ್ಣಮೂರ್ತಿ, ಕವಿಗಳು ಮುನ್ನೂರು ಕಾಪು ಹಿರಿಯ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News