ಮಸ್ಕಿ | ನಾಪತ್ತೆಯಾಗಿದ್ದ ಲ್ಯಾಬ್ ಟೆಕ್ನಿಶಿಯನ್‌ನ ಮೃತದೇಹ ಪತ್ತೆ
Update: 2025-05-06 16:28 IST
ರಾಯಚೂರು : ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಸ್ಕಿ ಪಟ್ಟಣದ ಲ್ಯಾಬ್ ಟೆಕ್ನಿಶಿಯನ್‌ನ ಮೃತದೇಹ ಮಸ್ಕಿ ಪಟ್ಟಣದ ಠಾಕೂರ್ ಲೇಔಟ್ ನಲ್ಲಿ ಪತ್ತೆಯಾಗಿದೆ.
ಮೃತರನ್ನು ಮಂಜುನಾಥ( 33) ಎಂದು ಗುರುತಿಸಲಾಗಿದೆ.
ಮಂಜುನಾಥ ಲಿಂಗಸುಗೂರು ತಾಲೂಕಿನ ಮೆದಿಕಿನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಮಂಜುನಾಥ ಅವರ ಪತ್ನಿ ಲಕ್ಷ್ಮೀ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ.