ಹಟ್ಟಿಯಲ್ಲಿ ʼಓಟ್ ಚೋರ್ ಗದ್ದಿ ಚೋಡ್ ಅಭಿಯಾನʼ : ಮನೆಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಭೇಟಿ
Update: 2025-10-20 19:11 IST
ಲಿಂಗಸುಗೂರು: ತಾಲೂಕಿನ ಹಟ್ಟಿ ಚಿನ್ನದ ಗಣಿ ಕ್ಯಾಂಪ್ ಹಾಗೂ ಪಟ್ಟಣದಲ್ಲಿ ಯುವ ಕಾಂಗ್ರೆಸ್ ವತಿಯಿಂದ 'ಓಟ್ ಚೋರ್ ಗದ್ದಿ ಚೋಡ್' (ಮತಗಳ್ಳರೇ ಕುರ್ಚಿ ಖಾಲಿ ಮಾಡಿ) ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಟ್ಟಿ ವಿಭಾಗದ ಅಧ್ಯಕ್ಷ ಲಾಲ್ ಪೀರ್, ಹುಸೇನ್ ಸಾಬ್, ಕರೀಮ್ ಹಾಗೂ ಮತ್ತಿತರರು ಮನೆ ಮನೆಗಳಿಗೆ ಭೇಟಿ ನೀಡಿ ಮತಗಳ್ಳತನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಸಹಿ ಸಂಗ್ರಹ ನಡೆಸಿದರು.
ಬಿಜೆಪಿ ಚುನಾವಣಾ ಆಯೋಗವನ್ನು ದುರುಪಯೋಗ ಪಡೆಸಿಕೊಂಡು ಮತದಾರರ ಪಟ್ಟಿಯನ್ನು ತಿರುಚಿ ಕಳ್ಳಮಾರ್ಗದಿಂದ ಅಧಿಕಾರಕ್ಕೆ ಬರಲು ಕೆಲಸ ಮಾಡಿದೆ ಮತದಾರರು ಜಾಗೃತರಾಗಬೇಕಿದೆ. ನಮ್ಮ ಮತ ನಮ್ಮ ಹಕ್ಕು ಇದರ ದುರುಪಯೋಗ ತಡೆಗೆ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ಲಾಲ್ ಪೀರ್ ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ಅಸೀಫ್, ಮಲ್ಲಣ್ಣ, ಮಹಮ್ಮದ್ ಸಾದೀಕ್, ಶಂಶುದ್ದೀನ್ ಮತ್ತಿತರರು ಇದ್ದರು.