×
Ad

ರಾಯಚೂರು | ಸಂವಿಧಾನ ಸಂರಕ್ಷಣಾ ಪಡೆಯಿಂದ ಜಾಗೃತಿ ಜಾಥಾ

Update: 2025-11-18 16:50 IST

ರಾಯಚೂರು : ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಮಂಗಳವಾರ ಸಂವಿಧಾನ ಸಂರಕ್ಷಣಾ ಪಡೆಯಿಂದ ಜಾಗೃತಿ ಜಾಥಾ ನಡೆಯಿತು.

ನಗರದ ಕರ್ನಾಟಕ ಸಂಘದಿಂದ ಶೆಟ್ಟಿಭಾವಿ ವೃತ್ತದ ಮಾರ್ಗವಾಗಿ ಬಂಗಾರ ಬಜಾರ್, ತೀನ್ ಖಂದಿಲ್, ತಹಶೀಲ್ದಾರ್ ಕಚೇರಿ, ಮಹಾನಗರ ಪಾಲಿಕೆ ಕಚೇರಿ, ಕೇಂದ್ರ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದವರೆಗೆ ಜಾಥಾ ನಡೆಯಿತು.

ಜಾಥಾದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳು, ಹಿಂದೂ, ಮುಸ್ಲಿಂ, ಕ್ತೈಸ್ತ, ಬೌದ್ಧ ಧರ್ಮದ ಧರ್ಮಾಧಿಕಾರಿಗಳು, ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು ಪಾಲ್ಗೊಂಡು ಜೈ ಭೀಮ್ ಘೊಷಣೆ ಕೂಗಿ ಗಮನಸೆಳೆದರು.  

ಸಂವಿಧಾನ ಜಾರಿಗೊಂಡು ದಶಕಗಳು ಕಳೆದಿರುವುದರಿಂದ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.

ಜಾಥಾದಲ್ಲಿ ಸಂವಿಧಾನ ಸಂರಕ್ಷಣಾ ಪಡೆಯ ಸಂಚಾಲಕ ಎಂ.ಆರ್ ಬೇರಿ, ಬೌದ್ಧ ಧರ್ಮದ ಬಂತೇಜಿ, ವಿಧಾನ ಪರಿಷತ್ ಸದಸ್ಯ‌ ಎ.ವಸಂತ ಕುಮಾರ್‌, ಕೆ.ಇ ಕುಮಾರ್‌, ಜಾನ್ ವೆಸ್ಲಿ, ರಜಾಕ್ ಉಸ್ತಾದ್,‌ ಮುಹಮ್ಮದ್ ಶಾಲಂ, ಅಸಿಮುದ್ದೀನ್ ಅಕ್ತರ್, ಎಂ.ವಿರುಪಾಕ್ಷಿ, ವಿಶ್ವನಾಥ ಪಟ್ಟಿ, ಅಕ್ಬರ್ ನಾಗುಂಡಿ, ತೌಸೀಫ್ ಅಹ್ಮದ್, ಎಚ್.ಪದ್ಮಾ, ವಿಜಯರಾಣಿ ಸಿರವಾರ ಮತ್ತಿತರರು ಉಪಸ್ಥಿತರಿದ್ದರು.  


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News