ರಾಯಚೂರು | ಕಾರು ಅಪಘಾತ : ಪಿಎಸ್‌ಐ ಸಹಿತ ಐವರಿಗೆ ಗಾಯ
Update: 2025-11-10 17:23 IST
ರಾಯಚೂರು : ಕಾರು ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ದೇವದುರ್ಗ ತಾಲೂಕಿನ ಗಬ್ಬೂರು ಠಾಣೆ ಪಿಎಸ್ಐ ಸೇರಿದಂತೆ ಐವರು ಗಾಯಗೊಂಡಿದ್ದಾರೆ.
ರಾಯಚೂರು ತಾಲೂಕಿನ ಮುರಾನಪುರ ಬಳಿ ರವಿವಾರ ಮಧ್ಯರಾತ್ರಿ ಕಾರು ಮರಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಪಿಎಸ್ಐ ಅರುಣ್ ಕುಮಾರ್ ರಾಥೋಡ್ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ಕಾರು ಚಾಲಕನಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಕಾರ್ಯಕ್ರಮದ ನಿಮಿತ್ತ ಬಿಗಿ ಭದ್ರತೆ ಕಲ್ಪಿಸಲು ತೆರಳಿದ್ದ ಪಿಎಸ್ಐ ಅಲ್ಲಿಂದ ಕುಟುಂಬ ಸಮೇತ ಖಾಸಗಿ ಕಾರಿನಲ್ಲಿ ವಾಪಾಸ್ಸು ಮರುಳುವಾಗ ಅಪಘಾತ ಸಂಭವಿಸಿದೆ.