ರಾಯಚೂರು| ಪೊಲೀಸರ ಮೇಲೆ ಹಲ್ಲೆ ಆರೋಪ; ದಂಪತಿಯ ಬಂಧನ
Update: 2025-11-12 18:19 IST
ರಾಯಚೂರು: ಲಿಂಗಸುಗೂರು ತಾಲೂಕಿನ ಮುದಗಲ್ ಬಳಿಯ ಮಟ್ಟೂರು ತಾಂಡಾದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ದಂಪತಿಯನ್ನು ಮುದಗಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಒಂದರ ವಿಚಾರಣೆಗೆ ಆರೋಪಿಯನ್ನು ಕರೆತರಲು ಹೋದ ಮುದಗಲ್ ಠಾಣೆ ಎ.ಎಸ್.ಐ ವೆಂಕಟಪ್ಪ ನಾಯಕ್ ಹಾಗೂ ಪಿಎಸ್‌ಐ ವೆಂಕಟೇಶ ಮಾಡಗೇರಿ ಎಂಬವರ ಮೇಲೆ ದಂಪತಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣ ಒಂದರ ವಿಚಾರಣೆ ನಡೆಸಲು ಹೋದಾಗ ರಾಮಪ್ಪ ಹಾಗೂ ಆತನ ಪತ್ನಿ ಸಕ್ಕುಬಾಯಿ ಎಂಬವರು ಹಲ್ಲೆ ನಡೆಸಿ, ಪೊಲೀಸರ ಪೋನ್ ಅನ್ನು ಕಸಿದುಕೊಂಡಿದ್ದರು ಎನ್ನಲಾಗಿದೆ,
ಹಲ್ಲೆಗೊಳಗಾದ ಪಿಎಸ್ಐ ಹಾಗೂ ಎಸ್ಐ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುದಗಲ್ ಪೊಲೀಸ್ ಪಡೆಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂದಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.