×
Ad

ರಾಯಚೂರು: ಆತ್ಕೂರು ಗ್ರಾಮದ ಅಂಬಭವಾನಿ ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶ ನಿರಾಕರಣೆ; ಆರೋಪ

Update: 2025-09-22 11:27 IST

ರಾಯಚೂರು: ತಾಲೂಕಿನ ಆತ್ಕೂರು ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಪರಿಶಿಷ್ಟ ಜಾತಿಯ (ಮಾದಿಗ ಸಮುದಾಯದ) ಯುವಕರಿಗೆ ಅಂಬಭವಾನಿ ದೇವಸ್ಥಾನದ ಒಳಗೆ ಪ್ರವೇಶ ನಿರಾಕರಿಸಿದ Gಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ನವರಾತ್ರಿ ಉತ್ಸವದ ಅಂಗವಾಗಿ ಮಾಲೆ ಹಾಕಲು ಮುಂದಾಗಿದ್ದ ಪರಿಶಿಷ್ಟ ಜಾತಿಯ ಯುವಕರು ಮಾಲೆ ಧರಿಸಲು ಅಂಬಭವಾನಿ ದೇವಸ್ಥಾನಕ್ಕೆ ಆಗಮಿಸಿದಾಗ ಹೊರಗೆ ನಿಲ್ಲಿಸಿ ಮಾಲೆ ಹಾಕಲಾಗಿದೆ ಎಂದು ದೇವಸ್ಥಾನದ ಅರ್ಚಕರ ವಿರುದ್ಧ ಆರೋಪ ಕೇಳಿ ಬಂದಿದೆ.

ಯುವಕರು ದೇವಸ್ಥಾನದ ಹೊರಗೆ ನಿಂತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪ ಮಾಡಲಾಗಿದೆ. ಆದರೆ ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆ ಪಿಎಸ್ ಐ ಅವರನ್ನು ವಿಚಾರಿಸಿದಾಗ ಅಂಬಭವಾನಿ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಿದ ಬಗ್ಗೆ ಯಾವುದೇ ದೂರು ಬಂದಿಲ್ಲ. ಗ್ರಾಮದ ಕೆಲ ದಲಿತ ಸಮುದಾಯದ ಹಿರಿಯರನ್ನು ಕೇಳಿದರೆ ದಲಿತರಿಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿಲ್ಲ. ಆದರೆ ಕೆಲ ಯುವಕರು ಆರೋಪ ಮಾಡಿದ್ದರಿಂದ ಪೊಲೀಸರು ಆತ್ಕೂರು ಗ್ರಾಮಕ್ಕೆ ಹೋಗಿ ವಿಚಾರಿಸುತ್ತಿದ್ದಾರೆ ಎಂದು ತಿಳಿಸಿದರು.

ದೇವಸ್ಥಾನದ ಅರ್ಚಕರು ಈ ಆರೋಪ ಅಲ್ಲಗೆಳೆದಿದ್ದಾರೆ. ಈ ಕುರಿತು ಯಾರೇ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News