×
Ad

ರಾಯಚೂರು : ವಿಕಲಚೇತನ ಯುವತಿ ನಾಪತ್ತೆ

Update: 2025-05-31 22:20 IST

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ನಿವಾಸಿಯಾಗಿರುವ ವಿಕಲಚೇತನ ಯುವತಿ ಹೊನ್ನಮ್ಮ ನಾಪತ್ತೆಯಾಗಿದ್ದಾರೆ.  

ಮೇ 26ರ ಬೆಳಿಗ್ಗೆ 8 ಗಂಟೆಗೆ ತಂದೆ ಸಾಬಯ್ಯ ಜೊತೆಗೆ ಗಬ್ಬೂರ ಹೊಸ ಬಸ್ ನಿಲ್ದಾಣದ ಬಳಿ ಇರುವ ಆಂಜನೇಯ ದೇವಸ್ಥಾನಕ್ಕೆ ವಿಕಲಚೇತನರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಹೊನ್ನಮ್ಮ ಬಳಿಕ ನಾಪತ್ತೆಯಾಗಿದ್ದರು.  

ಹೊನ್ನಮ್ಮ ಅವರು ಸದೃಢ ದೇಹ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, 5.0 ಅಡಿ ಎತ್ತರವನ್ನು ಹೊಂದಿದ್ದಾರೆ. ನಾಪತ್ತೆ ವೇಳೆ ಅವರು ಬಿಳಿ ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಮಾತನಾಡುತ್ತಿದ್ದರು. 

ಈ ಕುರಿತು ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಯುವತಿಯ ಬಗ್ಗೆ ಮಾಹಿತಿ ದೊರೆತರೆ ಗಬ್ಬೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 9480803860, ದೇವದುರ್ಗ ಸಿಪಿಐ ಮೊಬೈಲ್ ಸಂಖ್ಯೆ: 9480803835ಗೆ ಸಂಪರ್ಕ ಮಾಡಬೇಕಾಗಿ ಗಬ್ಬೂರ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News