ರಾಯಚೂರು | ಹಟ್ಟಿ ತಾಲೂಕು ರಚನೆಗೆ ಹೋರಾಟ : ಪ್ರಗತಿಪರ ಸಂಘಟನೆಗಳಿಂದ ಸಭೆ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣವನ್ನು ತಾಲೂಕು ರಚನೆ ಮಾಡಬೇಕು ಎಂದು ಒತ್ತಾಯಿಸಿ ಹೋರಾಟಗಾರರು, ಪ್ರಗತಿಪರ, ದಲಿತಪರ ಹೋರಾಟಗಾರರ ನೇತೃತ್ವದಲ್ಲಿ ಹಟ್ಟಿ ತಾಲೂಕು ಹೋರಾಟ ಸಮಿತಿ ರಚನೆ ಮಾಡಿ ಹೋರಾಟಕ್ಕೆ ಮುಂದಾಗಿದ್ದು, ಹಟ್ಟಿ ಪಟ್ಟಣದ ದಾರುವಾಲಾ ಕ್ರೀಡಾಂಗಣದಲ್ಲಿ ಬುಧವಾರ ಸಭೆ ಮಾಡಲಾಯಿತು.
ಸಭೆಯಲ್ಲಿ ಮುಖಂಡ ಹನುಮಂತ ಸುಣದ್ಕಲ್ ಮಾತನಾಡಿ, ಹಟ್ಟಿ ಚಿನ್ನದ ಗಣಿ ತಾಲೂಕು ಸಮಿತಿ ರಚನೆ ಮಾಡಿದ್ದು, ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಪ್ರತಿಯೊಂದು ಹಂತದಲ್ಲಿ ನಾವು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಿದೆ. ಸುಮಾರು 35 ವರ್ಷಗಳಿಂದ ಹಟ್ಟಿ ಪಟ್ಟಣ ತಾಲೂಕು ಆಗಬೇಕೆಂಬುದು ನಮ್ಮ ಹಿರಿಯರಿಂದ ಇಲ್ಲಿಯವರೆಗೂ ನಮ್ಮ ಕೂಗು ಕೇಳಿ ಬಂದಿದೆ. ಸಮಿತಿಯ ನಿರ್ಣಯಕ್ಕೆ ಬದ್ಧರಾಗಿ ಮುನ್ನಡೆಯೋಣ ಎಂದರು.
ಇದೇ ವೇಳೆಯಲ್ಲಿ ಹಿರಿಯ ಹೋರಾಟಗಾರ ಕುಪ್ಪಣ್ಣ ಹೊಸಮನಿ ಮಾತನಾಡಿ, ಹಟ್ಟಿ ಪಟ್ಟಣದಲ್ಲಿ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆ, ಮೂಲಸೌಕರ್ಯದ ಕೊರತೆ ಇದೆ. ಜನಸಂಖ್ಯೆಯೂ ಹೆಚ್ಚಿದೆ ತಾಲೂಕಿಗೆ ಬೇಕಾದ ಎಲ್ಲಾ ಅರ್ಹತೆ ಇದ್ದರೂ, ತಾಲೂಕು ಆಗಿಲ್ಲ. ರಾಜಕೀಯ ನಾಯಕರನ್ನು ಒಳಗೊಂಡು ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಆದಪ್ಪ ಆದಾಪುರ್, ಎಐಟಿಯುಸಿ ಚಂದ್ರು, ಹಿರಿಯ ಹೋರಾಟಗಾರ ಕುಪ್ಪಣ್ಣ ಹೊಸಮನಿ, ಕಾರ್ಮಿಕ ಸಂಘದ ಉಪಾಧ್ಯಕ್ಷ ತಿಪ್ಪಣ್ಣ , ಕರವೇ ಅಧ್ಯಕ್ಷ ಮೌನೇಶ್ ಕಾಕಾ ನಗರ, ಸೂಗಪ್ಪ ಬಸವೇಶ್ವರ ದೇವಸ್ಥಾನ ಅಧ್ಯಕ್ಷ, ನದಾಫ್ ಸಂಘದ ತಾಲೂಕ ಅಧ್ಯಕ್ಷ ಅಮಿನುದ್ದಿನ್ ಜಾಂತಪುರ್, ಸಿಐಟಿಯು ನಿಂಗಪ್ಪ ವೀರಪುರ, ಶಿವರಾಜ್ ನಾಯಕ್ ಗುರಿಕಾರ್, ಹಾಜಿ ಬಾಬು, ವಿಜಯ ಕುಮಾರ್, ಆದಪ್ಪ, ರಂಗನಾಥ, ಮಂಜುನಾಥ್ ಕಲ್ಕೇರಿ ಜಂಬಣ್ಣ, ಅಮರಗುಂಡಪ್ಪ ಶೆಟ್ಟಿ ರಾಘವೇಂದ್ರ ಶೆಟ್ಟಿ, ಮಹಾಂತೇಶ, ವಿಜಯಕುಮಾರ್ ಸಜ್ಜನ್, ಸಿಡಿ ರಾಜು, ಕೀರಣ ಕುಲಕರ್ಣಿ, ಹಿಂದೂ ದಲಿತ ಸಂಘಟನೆಯ ವಿನೋದ್ ಕುಮಾರ್, ಸಾಮಾಜಿಕ ಹೋರಾಟಗಾರ ಸುರೇಶ್ ಗೌಡ ಗುರಿಕಾರ, ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಮಲ್ಲಿಕಾರ್ಜುನ ಚಿತ್ರನಾಳ, ಸಹ ಸಂಚಾಲಕ ಲಾಲ್ ಪೀರ್, ಅರಬ್ ರಾಜ್ ಚಂದ್ರು ಗೆಜ್ಜಲಗಟ್ಟ ಇದ್ದರು.