×
Ad

ರಾಯಚೂರು: ಅಗ್ನಿ ಅವಘಡ; ಸುಟ್ಟು ಕರಕಲಾದ ಅಡುಗೆ ಸಾಮಗ್ರಿಗಳು, ತಪ್ಪಿ ಭಾರೀ ಅನಾಹುತ

Update: 2025-07-29 12:30 IST

ರಾಯಚೂರು: ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಮನೆ ಸಾಮಗ್ರಿಗಳು ಸುಟ್ಟು ಹೋಗಿರುವ ಘಟನೆ ಸೋಮವಾರ ನಗರದ ಪಟೇಲ್ ರಸ್ತೆಯಲ್ಲಿನ ಮನೆಯೊಂದರಲ್ಲಿ ನಡೆದಿದೆ.

ಪಟೇಲ್ ರಸ್ತೆಯ ಮನೆಯೊಂದರಲ್ಲಿ ಕಚೋರಿ, ಸಮೋಸ ಮಾರುವ ಉದಯಕುಮಾರ್ ಎಂಬವರು  ಮನೆಯ ಹಿಂಬದಿಯಲ್ಲಿ ತಿಂಡಿಗಳನ್ನು ತಯಾರಿಸುತ್ತಿದ್ದರು.  ಈ ವೇಳೇ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

 ಅದೇ ಮನೆಯಲ್ಲಿ ನಾಲ್ಕು ತುಂಬಿದ ಅಡುಗೆ ಅನಿಲಗಳಿದ್ದು, ಬೆಂಕಿ ತಗುಲಿ ಸಿಲಿಂಡರ್ ಗಳು ಸ್ಫೋಟಗೊಂಡಿದ್ದರೆ ಅಕ್ಕಪಕ್ಕದ ಮನೆಗಳಿಗೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದವು. ಆದರೆ ಅಗ್ನಿ ಶಾಮಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿವೆ.

ತಿಂಡಿಗೆ ಬಳಸುತ್ತಿದ್ದ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳು ಬೆಂಕಿಗೆ ಸುಟ್ಟು ಹೋಗಿವೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News