ರಾಯಚೂರು: ಅಗ್ನಿ ಆಕಸ್ಮಿಕ; ಕ್ಯಾಂಟರ್‌ನಲ್ಲಿದ್ದ ಸಿಲಿಂಡರ್ ಗೆ ಬೆಂಕಿ, ತಪ್ಪಿದ ಭಾರೀ ಅನಾಹುತ
Update: 2025-07-03 08:30 IST
ರಾಯಚೂರು : ಸಂಚಾರ ನಿಯಮ ಪಾಲನೆಗೆ ರಸ್ತೆಗೆ ಬಿಳಿ ಬಣ್ಣ ಬಳಿಯಲು ಉಪಯೋಗಿಸುತ್ತಿದ್ದ ಕ್ಯಾಂಟರ್ ವಾಹನದಲ್ಲಿರಿಸಲಾಗಿದ್ದ ಗ್ಯಾಸ್ ಸಿಲಿಂಡರಿಗೆ ಬೆಂಕಿ ತಗುಲಿದ ಘಟನೆ ನಗರದ ಹೈದ್ರಾಬಾದ್ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಕ್ಯಾಂಟರ್ ಲಾರಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ 10 ಸಿಲಿಂಡರ್ ಗಳನ್ನು ಇರಿಸಲಾಗಿತ್ತು. ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಗಮನಿಸಿ ಬೆಂಕಿ ನಂದಿಸಿ ಕರ್ತವ್ಯ ಪ್ರಜ್ಞೆಯಿಂದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಅದೃಷ್ಠವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಕೆ.ನರಸಪ್ಪ , ರಂಗಪ್ಪ , ಬಸವರಾಜ್ , ಸಾಬಣ್ಣ , ನಾಸೀರ್ , ಮಲ್ಲಿಕಾರ್ಜುನ ಉಪಸ್ಥಿತರಿದ್ದರು.