×
Ad

ರಾಯಚೂರು | ಮೇ 31ರಂದು ಉಚಿತ ಕ್ಯಾನ್ಸರ್ ಆರೋಗ್ಯ ತಪಾಸಣಾ ಶಿಬಿರ

Update: 2025-05-28 19:50 IST

ರಾಯಚೂರು : ಹೆಚ್ ಸಿಜಿ ಕ್ಯಾನ್ಸರ್ ಸೆಂಟರ್ ಕಲಬುರಗಿ ಮತ್ತು ಬೆಟ್ಟದೂರು ಸೂಪರ್ ಸ್ಪೇಷಾಲಿಟಿ ಇವರ ಸಂಯುಕ್ತಾಶ್ರಯದಲ್ಲಿ ಮೇ 31ರಂದು ನಗರದ ಬೆಟ್ಟದೂರು ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಡಾ.ಜಯಪ್ರಕಾಶ್ ಪಾಟೀಲ್ ಹೇಳಿದರು.

ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಕುರಿತು ಜನರಿಗೆ ಭಯ, ಆತಂಕ ಉಂಟಾಗುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕೊರಳಿನ ಕ್ಯಾನ್ಸರ್ ಅತಿಹೆಚ್ಚು ಉಂಟಾಗುತ್ತಿವೆ. ಪ್ರಾರಂಭ ಹಂತದಲ್ಲೇ ರೋಗ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿದಾಗ ಮಾತ್ರ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಮೇ 31 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ನಡೆಯಲಿದೆ.

ಹೆಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಯ ದಿಲೀಪ್ ಪಾಟೀಲ್ ರವರು ಮಾತನಾಡಿ, ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ , ಪುರುಷರಲ್ಲಿ ಅನ್ನನಾಳ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಸೇರಿ ಸರ್ಕಾರದ ಯೋಜನೆಗಳು ಮತ್ತು ಖಾಸಗಿ ವಿಮಾ ಕಂಪನಿಗಳ ಸೌಲಭ್ಯಗಳು ನಮ್ಮ ಆಸ್ಪತ್ರೆಯಲ್ಲಿವೆ. ತಪಾಸಣೆ ಉಚಿತ ನಡೆಸಿ, ಯೋಜನೆಗಳಡಿ ಉಚಿತವಾಗಿಯೇ ಆರೈಕೆ ಮಾಡಲಾಗುವುದು. ಬೇರೆ ಬೇರೆ ಜಿಲ್ಲೆಗಳಲ್ಲೂ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಬಿರದ ಆಯೋಜಕರಾದ ರಮೇಶ ಪಾಟೀಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News