×
Ad

ರಾಯಚೂರು | ಶಾರ್ಟ್ ಸರ್ಕ್ಯೂಟ್‍ನಿಂದ ಮನೆಗೆ ಬೆಂಕಿ ; ನಗದು, ಧವಸ ಧಾನ್ಯ ಸುಟ್ಟು ಕರಕಲು

Update: 2025-11-19 19:08 IST

ಸಾಂದರ್ಭಿಕ ಚಿತ್ರ

ರಾಯಚೂರು : ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ನಗ, ನಗದು, ಧವಸ ಧಾನ್ಯ ಸುಟ್ಟು ಹೋದ ಘಟನೆ ಮಾನ್ವಿ ತಾಲೂಕಿನ ಅರೋಲಿ ಗ್ರಾಮದಲ್ಲಿ ನಡೆದಿದೆ.

ಅರೋಲಿ ಗ್ರಾಮದ ರೈತ ದುಗನೂರು ರಾಮಯ್ಯ ಅವರ ನಿವಾಸದಲ್ಲಿ ಶಾರ್ಟ್ ಸರ್ಕ್ಯೂಟ್‌ ಉಂಟಾಗಿದೆ. ಅಗ್ನಿ ಅವಘಡದಿಂದಾಗಿ ಮನೆಯಲ್ಲಿರುವ ಗೃಹ ಉಪಯೋಗಿ ವಸ್ತುಗಳು, 2 ತೊಲೆ ಚಿನ್ನ ಮತ್ತು ನಗದು ಸುಟ್ಟು ಕರಕಲಾಗಿದೆ.  

ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News