×
Ad

ರಾಯಚೂರು | ಜಮಾಅತೆ ಇಸ್ಲಾಂ ಹಿಂದ್ ವತಿಯಿಂದ 'ಮಾದರಿ ನೆರೆಹೊರೆ, ಮಾದರಿ ಸಮಾಜ' ಅಭಿಯಾನ

Update: 2025-11-20 20:07 IST

ರಾಯಚೂರು : ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ 'ಮಾದರಿ ನೆರೆಹೊರೆ, ಮಾದರಿ ಸಮಾಜ' ಅಭಿಯಾನ ನವೆಂಬರ್ 21ರಿಂದ 30ವರೆಗೆ ನಡೆಯಲಿದೆ. ಸಮಾಜ ಕಟ್ಟುವ ಕೆಲಸಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಜಮಾಅತೆ ಹಿಂದ್ ಜಿಲ್ಲಾ ಘಟಕದ ಮುಖಂಡ ಸಲೀಂ ಪಾಷಾ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಲೀಂ ಪಾಷಾ, ಪ್ರವಾದಿ ಮುಹಮ್ಮದ್ ಅವರು ಹೇಳಿದಂತೆ ವ್ಯಕ್ತಿಯೊಬ್ಬನ ವ್ಯಕ್ತಿತ್ವ ಗುರುತಿಸಬೇಕಾದರೆ ಆತನು ನೆರೆಹೊರೆಯವರ ಜೊತೆ ಹೇಗಿದ್ದಾನೆ ಎಂಬುವುದರ ಬಗ್ಗೆ ತಿಳಿಯುತ್ತದೆ ಎಂದು ಹೇಳಿದರು.  

ಅಭಿಯಾನದ ಭಾಗವಾಗಿ ಜಿಲ್ಲೆ, ತಾಲೂಕು, ಹೋಬಳಿಗಳಲ್ಲಿ ನೆರೆಹೊರೆಯವರ ಸಭೆ, ಪೋಸ್ಟರ್ ಬಿಡುಗಡೆ, ಕರಪತ್ರ ವಿತರಣೆ ನಡೆಯಲಿದೆ. ನಗರದಲ್ಲಿ ಮನೆ ಮನೆಗೆ ಹೋಗಿ ತಿಳುವಳಿಕೆ ಸಭೆಗಳನ್ನು ನಡೆಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ತಿಳುವಳಿಕೆ ನೀಡುವುದು, ಸಂಚಾರಿ ನಿಯಮಗಳನ್ನು ಪಾಲಿಸಲು ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಂ ಹಿಂದ್ ಜಿಲ್ಲಾ ಘಟಕದ ಅಧ್ಯಕ್ಷ ಅಸಿಮುದ್ದೀನ್ ಅಖ್ತರ್, ಅಬ್ದುಸ್ಸಮದ್, ಶಹನಾಜ್ ಬೇಗಂ, ರಶೀದ ಖಾನ್‍ ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News