×
Ad

ರಾಯಚೂರು | ಜೂ.3ರಿಂದ ಕಂಚುಮಾರೆಮ್ಮ ಜಾತ್ರಾ ಮಹೋತ್ಸವ : ಪಿ.ಯಲ್ಲಪ್ಪ

Update: 2025-05-28 19:54 IST

ರಾಯಚೂರು : ನಗರದ ಹರಿಜನವಾಡದ ಮಹಾಮಾತೆ ಕಂಚುಮಾರೆಮ್ಮ ದೇವಿಯ ಜಾತ್ರಾ ಮಹೋತ್ಸವವು ಜೂ.3 ರಿಂದ ಪ್ರಾರಂಭವಾಗಿ ಜೂ.6 ರವರೆಗೆ ಅದ್ದೂರಿಯಾಗಿ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಪಿ.ಯಲ್ಲಪ್ಪ ಅವರು ಹೇಳಿದರು.

ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಅತಿದೊಡ್ಡ ಜಾತ್ರೆಯಾದ ಕಂಚುಮಾರೆಮ್ಮ ಜಾತ್ರೆಯೂ ಜೂ.3 ಸಂಜೆ 5 ಗಂಟೆಗೆ ದೇವಿಯ ತೊಟ್ಟಿಲು ಮಹೋತ್ಸವವು ಸಿಟಿ ಟಾಕೀಜ್ ವೃತ್ತದಿಂದ ಪ್ರಾರಂಭವಾಗಿ ಚಂದ್ರಮೌಳೇಶ್ವರ‌ ವೃತ್ತ , ಮಹಾವೀರ ವೃತ್ತ , ಎಂ.ಜಿ ರಸ್ತೆ, ನೇತಾಜಿ ರಸ್ತೆ ಮುಖಾಂತರ ರಾತ್ರಿ‌10 ಗಂಟೆಗೆ‌ ದೇವಸ್ಥಾನ ಸೇರುವುದು.

ದಿನಾಂಕ 4 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗ ಕುಂಭಮೇಳ ಮಹೋತ್ಸವ ಜರುಗುವುದು. ಜೂ.5ರಂದು ಸಂಜೆ 5 ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಲಿದ್ದು , ಜೂನ್ 6ರಂದು ಸಂಜೆ 5 ಗಂಟೆಗೆ ಉಚ್ಚಾಯ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನರಸಿಂಹಲು ಮಾಡಗಿರಿ, ರವಿ ಜಲ್ದಾರ್ , ಪಿ.ಬೂದೆಪ್ಪ, ಎಸ್.ರಾಜು, ಈರಣ್ಣ ಭಂಡಾರಿ, ಪಿ.ಮುನಿಸ್ವಾಮಿ, ಎನ್.ಕೆ.ನಾಗರಾಜ್ ಸೇರಿದಂತೆ ಇನ್ನಿತರರು‌ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News