ರಾಯಚೂರು: ಚರಂಡಿ , ಬೋರವೆಲ್ ದುರಸ್ತಿಗೆ ಕೆಆರ್ ಎಸ್ ಆಗ್ರಹ
ಲಿಂಗಸುಗೂರು ನಗರದ ಚರಂಡಿಗಳಲ್ಲಿ ಕಸ ಕಡ್ಡಿ ಜಮಾವಣೆಗೊಂಡು ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ ಇದನ್ನು ಸರಿಪಡಿಸಬೇಕೆಂದು ರಾಷ್ಟ್ರ ಸಮಿತಿ ಪಕ್ಷ ತಾಲ್ಲೂಕು ಘಟಕ ವತಿಯಿಂದ ಒತ್ತಾಯಿಸಿದರು.
ನಗರದ ಚರಂಡಿಗಳನ್ನು ಎರಡ್ಮೂರು ತಿಂಗಳು ಕಳೆದರೂ ಪುರಸಭೆ ಇಲಾಖೆಯವರು ಸ್ವಚ್ಛಗೊಳಿಸಿಲ್ಲ. ಇದರಿಂದ ಕಸ್ ಕಡ್ಡಿ ಜಮಾವಾಗಿ ಚರಂಡಿಯಿಂದ ಮೇಲೇಕ್ಕೆ ನೀರು ಹರಿಯುತ್ತಿವೆ ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ ಎಂದು ಆಗ್ರಹಿಸಿದರು.
ನಗರದ ವಾರ್ಡ್ ನಂಬರ್ 07 ಅಮರೇಗೌಡ ಆಸ್ಪತ್ರೆ ಹಿಂದುಗಡೆ ಇರುವ ಸಾರ್ವಜನಿಕ ಉದ್ಯಾನವನದ ಬೋರ್ವೆಲ್ ಮತ್ತು ವಾರ್ಡ್ ನಂಬರ್ 10, ಡೋಹರ ಓಣಿ ಬನ್ನಿ ಕಟ್ಟೆ ಮುಂದೆ ಇರುವಂತಹ ಸಾರ್ವಜನಿಕ ಬೋರ್ವೆಲ್ ಗಳು ಕೆಟ್ಟು ಹೋಗಿ 8 ತಿಂಗಳು ಕಳೆದರೂ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿದರು.
ಹಿಂದೆಯೂ ಬೋರ್ವೆಲ್ ಗಳ ಬಗ್ಗೆ ಮನವಿ ಮಾಡಿದರು ತಮಗೆ ಸಂಬಂಧವಿಲ್ಲದಂತೆ ಸ್ಪಂದಿಸುತ್ತಿದ್ದಾರೆ. ಮೇಲೆ ಹೇಳಿದ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಪೋಳ, SC/ST ಘಟಕ ರಾಜ್ಯ ಕಾರ್ಯದರ್ಶಿ ಬಸವ ಪ್ರಭು,ರಾಜ್ಯ ಪ್ರಧಾನ ಕಾರ್ಯದರ್ಶಿ ನಿರುಪಾದಿ ಗೋಮಾರ್ಸಿ, ವಿಶ್ವನಾಥ್ ನಾಯ್ಡು, ಮಲ್ಲಿಕಾರ್ಜುನ್ ಪೂಜಾರಿ ಇನ್ನಿತರು ಉಪಸ್ಥಿತರಿದ್ದರು.