ರಾಯಚೂರು | ಕೆಎಸ್ ಆರ್ ಟಿಸಿ ಬಸ್ ಪಲ್ಟಿ : 13 ಪ್ರಯಾಣಿಕರಿಗೆ ಗಾಯ
Update: 2025-11-10 19:48 IST
ರಾಯಚೂರು: ಹೊಸಪೇಟೆಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್ ನಗರದ ಹೊರವಲಯದ ಸಾತ್‍ಮೈಲ್ ಬಳಿ ರವಿವಾರ ತಡರಾತ್ರಿ ಪಲ್ಟಿಯಾಗಿ 13 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತ ರವಿವಾರ ತಡರಾತ್ರಿ ನಡೆದಿದೆ. ಬಸ್ ಸಾತ್‍ಮೈಲ್ ಹತ್ತಿರದ ಹುಣಸಿಹಾಳಹುಡಾ ಗ್ರಾಮಕ್ಕೆ ಹೊರಡುವ ರಸ್ತೆ ಪಕ್ಕದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಘಟನೆಯ ನಂತರ ಸ್ಥಳೀಯರು ಮತ್ತು ಪೆಟ್ರೋಲ್ ಬಂಕ್ ಸಿಬ್ಬಂದಿಗಳ ಸಹಕಾರದಿಂದ ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಪ್ರತಾಪ್ ಸಿಂಗ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಎಚ್.ಎಂ. ಸ್ವಪ್ನ, ವೀರೇಶ್, ಉಷಾ, ಮಂಜುನಾಥ್, ಶ್ರೇಯಸ್, ಕೊಟ್ರಪ್ಪ, ದೀಪ, ಲಲಿತಾ ಹಜಾರೆ, ರೇಣುಕಾ, ಪ್ರಿಯಾಂಕ, ಶ್ವೇತಾ ಹಾಗೂ ಶಾದಾಬಾಯಿ ಎಂಬ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದೆ.
ಅಪಘಾತದ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣಾ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.