ರಾಯಚೂರು | ವ್ಯಕ್ತಿ ಕಾಣೆ; ಪತ್ತೆಗೆ ಮನವಿ
Update: 2025-08-17 19:19 IST
ರಾಯಚೂರು: ಶಕ್ತಿನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಪಾರ್ವತಿ ನಗರದ ನಿವಾಸಿ, ಆರ್.ಟಿ.ಪಿ.ಎಸ್‍ನಲ್ಲಿ ಟಿಕ್ನಿಷಿಯನ್‍ಯಾಗಿದ್ದ ಜಮಶೇರ್ ಅಲಿ (35) ಜೂ.20ರ ರಾತ್ರಿ 9ಗಂಟೆ ಸುಮಾರಿಗೆ ಮನೆಗೆ ನೀರು ತರುವುದಾಗಿ ಹೋಗಿದ್ದು, ಮರಳಿ ಬಂದಿಲ್ಲ. ಕೆಪಿಸಿ ಕಾಲೋನಿಯಲ್ಲಿರುವ ತನ್ನ ತಾಯಿಯನ್ನು ಮಾತನಾಡಿಸಿಕೊಂಡು ಬರುವುದಾಗಿ ತಿಳಿಸಿ ಮನೆಯಿಂದ ಹೋದವನ್ನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
5-8 ಅಡಿ ಎತ್ತರ, ಗೋದಿ ಮೈಬಣ್ಣ ಹೊಂದಿದ್ದು, ಹಿಂದಿ, ಕನ್ನಡ ಹಾಗೂ ತೆಲುಗು ಮಾತನಾಡುತ್ತಾರೆ.
ಈತನ ಸುಳಿವು ಸಿಕ್ಕಲ್ಲಿ ಪಿ.ಎಸ್.ಐ 9480803868, ಸಿಪಿಐ 9480803832, ಡಿಎಸ್ಪಿ 94808 03820 ಅಥವ ಕಂಟ್ರೋಲ್ ರೂಮ್ 08532-235635 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.