×
Ad

ರಾಯಚೂರು | ವ್ಯಕ್ತಿ ಕಾಣೆ: ಪತ್ತೆಗೆ ಪೊಲೀಸರ ಮನವಿ

Update: 2025-09-16 16:48 IST

ರಾಯಚೂರು: ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯ ಅಸ್ಕಿಹಾಳ ಗ್ರಾಮದ ಆಂಜನೇಯ (62) ಅವರು ಸೆಪ್ಟೆಂಬರ್ 14ರಂದು ಮನೆಯಿಂದ ಹೊರಟು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಈ ಕುರಿತು ಮನುಷ್ಯ ಕಾಣೆ ಪ್ರಕರಣ ದಾಖಲಿಸಲಾಗಿದ್ದು, ಆಂಜನೇಯ ಅವರ ಪುತ್ರ ರಮೇಶ್ ದೂರು ನೀಡಿದ್ದಾರೆ.

ಕಾಣೆಯಾದವರ ಚಹರೆ: 5.6 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ, ಉದ್ದ ಮುಖ, ಕಪ್ಪು ಕೂದಲು. ಧರಿಸಿದ್ದ ಬಟ್ಟೆ: ಬಿಳಿ ಪಂಚೆ, ಬಿಳಿ ಜುಬ್ಬ, ಹಸಿರು ಟಾವೆಲ್. ಕನ್ನಡ, ತೆಲುಗು, ಇಂಗ್ಲಿಷ್ ಮತ್ತು ಹಿಂದಿ ಮಾತನಾಡುತ್ತಾರೆ.

ಈ ವ್ಯಕ್ತಿಯ ಬಗ್ಗೆ ಸುಳಿವು ಕಂಡುಬಂದಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-232570, ಪಿ.ಎಸ್.ಐ ಮೊಬೈಲ್ ಸಂಖ್ಯೆ: 9480803847, ಪಶ್ಚಿಮ ವೃತ್ತ ಸಿ.ಪಿ.ಐ ಮೊಬೈಲ್ ಸಂಖ್ಯೆ: 9480803831, ಜಿಲ್ಲಾ ನಿಸ್ತಂತು ಘಟಕ ರಾಯಚೂರು ದೂರವಾಣಿ ಸಂಖ್ಯೆ: 08532-235635, 9480803800ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News