×
Ad

ರಾಯಚೂರು | ನಗರ ಸಭೆ ಉಪ ಚುನಾವಣೆ : ಶಾಂತಿಯುತ ಮತದಾನ

Update: 2024-11-23 18:39 IST

ರಾಯಚೂರು : ನಗರದ ವಾರ್ಡ್ 31ರ ನಗರಸಭೆ ಉಪ ಚುನಾವಣೆಯು ಶನಿವಾರ ನಗರದ ಹಿಂದಿ ವರ್ಧಮಾನ ಶಾಲೆಯ ಮತಗಟ್ಟೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೇಣುಕಾ ಭೀಮರಾಯ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದ ಮೇರೆಗೆ ಅನರ್ಹಗೊಂಡಿದ್ದರಿಂದ ಉಪ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಜೆಪಿಯಿಂದ ಗಿರಿಜಾ ರವಿ ರಾಘವೇಂದ್ರ ಹಾಗೂ ಕಾಂಗ್ರೆಸ್ ಪಕ್ಷದಿಂದ ಆಂಜೀನಮ್ಮ ಶಾಮಸುಂದರ್ ಕಣದಲ್ಲಿದ್ದಾರೆ.

ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News