×
Ad

ರಾಯಚೂರು | ಪೊಲೀಸರಿಂದಲೇ ಡಿಜೆ ಬ್ಯಾನ್ ಆದೇಶ ಉಲ್ಲಂಘನೆ : ಡಿಜೆ ಹಾಡಿಗೆ ಕುಣಿದ ಪಿಎಸ್ಐ ; ವೀಡಿಯೊ ವೈರಲ್‌

Update: 2025-09-05 21:34 IST

ರಾಯಚೂರು: ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಡಿ.ಜೆ ಬಳಸುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಡಿಜೆಯನ್ನು ನಿಷೇಧ ಮಾಡಿದೆ. ಆದರೆ, ಆದೇಶ ಪಾಲನೆ ಮಾಡಬೇಕಾದ ಪಿಎಸ್ಐ ಅವರೇ ಡಿಜೆ ಹಾಡಿಗೆ ಕುಣಿದಿದ್ದಾರೆ ಎಂಬ ವೀಡಿಯೊ ವೈರಲ್‌ ಆಗಿದೆ.

ರಾಯಚೂರಿನ ಹರಿಜನವಾಡ ಬಡಾವಣೆಯಲ್ಲಿ ಸ್ಥಾಪಿಸಲಾದ ಬೃಹತ್ ಗಾತ್ರದ ಗಣೇಶ ಮೂರ್ತಿ ವಿಸರ್ಜನೆಯ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಯುವಕರು ಕುಣಿಯುತ್ತಿರುವಾಗ ಪಶ್ಚಿಮ ಠಾಣೆಯ ಪಿಎಸ್ ಐ ಮಂಜುನಾಥ ಡಿಜೆ ಹಾಡಿಗೆ ಯುವಕರೊಂದಿಗೆ ಕುಣಿದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಯಚೂರು ನಗರ ಸೇರಿ ಜಿಲ್ಲೆಯಾದ್ಯಂತ ರಾತ್ರಿ ಶುರುವಾಗ ವಿಸರ್ಜನಾ ಮೆರವಣಿಗೆ ಮಾರನೇ ದಿನ ಮಧ್ಯಾಹ್ನದವರೆಗೆ ನಡೆಯುತ್ತದೆ. ರಾತ್ರಿ ವಿಸರ್ಜಿಸಬೇಕಾದ ಗಣೇಶ ವಿಗ್ರಹಗಳನ್ನು ಬೆಳಗಿನ ಜಾವ, ಮಧ್ಯಾಹ್ನದ ವೇಳೆ ವಿಸರ್ಜನೆ ಮಾಡಲಾಗುತ್ತದೆ. ಹರಿಜನವಾಡ ಬಡಾವಣೆಯ ಗಣೇಶ 9ನೇ ದಿನಕ್ಕೆ ವಿಸರ್ಜನೆಯಾಗಬೇಕಿದ್ದು, ಆದರೆ ವಿಸರ್ಜನೆಗೆ ಸೂಚಿಸಿದ ಖಾಸಭಾವಿಯಿಂದ ತೀನ್ ಖಂದಿಲ್ ವರೆಗೆ ಸರಿತಿ ಸಾಲು ಇರುವುದರಿಂದ 9ನೇ ದಿನದ ಗಣೇಶ 10ನೇ ದಿನ ವಿಸರ್ಜನೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News