×
Ad

ರಾಯಚೂರು | ಮಹಿಳೆ ಕಾಣೆ: ಪ್ರಕರಣ ದಾಖಲು

Update: 2025-05-02 18:40 IST

ರಾಯಚೂರು : ರಾಯಚೂರಿನ ಜಲಾಲ್ ನಗರದ ನಿವಾಸಿ ನರಸಪ್ಪ ಎಂಬವರ ಪತ್ನಿ ನರಸಮ್ಮ (65) ನಾಪತ್ತೆಯಾಗಿರುವ ಬಗ್ಗೆ ರಾಯಚೂರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ.17ರಂದು ರಾತ್ರಿ ತಮ್ಮ ತಾಯಿಯನ್ನು ಮನೆಯ ಹೊರಗಡೆ ಮಲಗಿದ್ದರು. ಮಾ.18ರಂದು ಬೆಳಗಿನ ಜಾವ 3 ಗಂಟೆಗೆ ಎದ್ದು ನೋಡಿದಾಗ ತಮ್ಮ ತಾಯಿಯು ಇರಲಿಲ್ಲ. ಎಲ್ಲ ಕಡೆ ವಿಚಾರಿಸಿದ ಬಳಿಕ ದೂರು ದಾಖಲಿಸಿದ್ದಾರೆ.

ಚಹರೆ: ನರಸಮ್ಮ 4 ಅಡಿ 6 ಇಂಚು, ಕಪ್ಪು ಮೈಬಣ್ಣ, ದುಂಡು ಮುಖ, ತೆಳ್ಳನೆಯ ಮೈಕಟ್ಟು ಹೊಂದಿದ್ದಾರೆ. ಗ್ರೇ ಬಣದ್ಣ ಸೀರೆ, ಗುಲಾಬಿ ಬಣ್ಣದ ಕುಪ್ಪಸ ಧರಿಸಿರುತ್ತಾರೆೆ. ಕನ್ನಡ ಮತ್ತು ತೆಲುಗು ಮಾತನಾಡುತ್ತಾರೆ.

ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಸಿಪಿಐ ಪಶ್ಚಿಮ ವೃತ್ತ 08532-226856, 9480803831 ಅಥವಾ ಪಿಎಸ್‌ಐ ಮಾರ್ಕೆಟ್ ಯಾರ್ಡ್ ಠಾಣೆ 08532-235600, 9480803849ಗೆ ಸಂಪರ್ಕಿಸಲು ಮಾರ್ಕೆಟ್ ಯಾರ್ಡ್ ಠಾಣೆಯ ಆರಕ್ಷಕ ಉಪನಿರೀಕ್ಷಕರ ಕಚೇರಿಯ ಪ್ರಕಟನೆೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News