×
Ad

ರಾಯಚೂರು | ಮಹಿಳೆ ಕಾಣೆ: ಪತ್ತೆಗೆ ಪೊಲೀಸರಿಂದ ಮನವಿ

Update: 2025-06-27 20:02 IST

ರಾಯಚೂರು: ಇಲ್ಲಿನ ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ರೇಣುಕಾ ಬುಜ್ಜಪ್ಪ (32) ಎಂಬ ಮಹಿಳೆಯು ಜೂನ್ 18ರ ಬೆಳಿಗ್ಗೆ 8.30ಕ್ಕೆ ಮನೆಯಿಂದ ಹೊರಗಡೆ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 70/2025 ಕಲಂರಡಿ ಪ್ರಕರಣ ದಾಖಲಾಗಿದೆ.

ಮಹಿಳೆಯು ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಎಟಿಎಮ್ ಕಾರ್ಡ ತೆಗೆದುಕೊಂಡು ಹೋಗಿರುತ್ತಾರೆ.

ಮಹಿಳೆಯ ಚಹರೆ ಪಟ್ಟಿ: ಎತ್ತರ 5.0 ಫೀಟ್, ದುಂಡು ಮುಖ, ಸದೃಢ ಮೈ ಕಟ್ಟು, ಸಾದ ಕೆಂಪು ಬಣ್ಣ, ಕಪ್ಪು ಬಣ್ಣದ ಕೂದಲು, ನೀಲಿ ಬಣ್ಣದ ಸೀರೆ, ಬಿಳಿ ಬಣ್ಣದ ಕುಪ್ಪಸ ಉಡುಪುಗಳನ್ನು ಧರಿಸಲಾಗಿದ್ದು, ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾರೆ.

ಈ ಮಹಿಳೆಯ ಸುಳಿವು ಸಿಕ್ಕಲ್ಲಿ ನೇತಾಜಿನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08532-240222 ಅಥವಾ ರಾಯಚೂರು ನಗರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08532-235635, 08532-235100, 9480803800 ಅಥವಾ ಪಿ.ಎಸ್.ಐ (ಕಾ.ಸು) 9480803846 ನೇತಾಜಿ ನಗರ ಠಾಣೆ ಹಾಗೂ ಸಿ.ಪಿ.ಐ ಪಶ್ಚಿಮ ವೃತ್ತ ರಾಯಚೂರು 9480803831ಗೆ ಸಂಪರ್ಕಿಸಬಹುದಾಗಿದೆ. ಮಾಹಿತಿ ನೀಡಿದವರಿಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದು ನೇತಾಜಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಲಕ್ಷ್ಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News