×
Ad

ಆರೆಸ್ಸೆಸ್ ನಿಂದ ದೇಶಕ್ಕೆ ಕೊಡುಗೆ ಶೂನ್ಯ : ವಿಧಾನ ಪರಿಷತ್ ಸದಸ್ಯ ವಸಂತಕುಮಾರ

Update: 2025-10-14 13:44 IST

ರಾಯಚೂರು: ಸರಕಾರಿ ಸ್ಥಳದಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧ ಮಾಡುವಂತೆ ಸಚಿವ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ಪತ್ರ ಸಮಾಂಜಸವಾಗಿದ್ದು, ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಅವರು ಹೇಳಿದರು.

ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಆರೆಸ್ಸೆಸ್ ಈ ದೇಶದಲ್ಲಿ ಅನೇಕ ಕೋಮುಗಲಭೆ ಸೃಷ್ಟಿಗೆ ಕಾರಣವಾಗಿದೆ. ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು ಎಂಬ ಅಜೆಂಡಾದಿಂದ ಆರೆಸ್ಸೆಸ್ ಸ್ಥಾಪನೆ ಆಗಿದೆ. ನೂರು ವರ್ಷ ಸಂಭ್ರಮಾಚರಣೆ ಮಾಡುತ್ತಿರುವ ಆರೆಸ್ಸೆಸ್ ನ ಕೊಡುಗೆ ಈ ದೇಶಕ್ಕೆ ಶೂನ್ಯ ಎಂದರು.

ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲಾ ಸಮಾಜದವರ ಭಾವನೆ ಒಂದೇ. ಆದರೆ ಆರೆಸ್ಸೆಸ್ ಮಾತ್ರ ಅನ್ಯ ಧರ್ಮದ ಹೆಸರಲ್ಲಿ ಸಮಾಜದ ಸ್ವಸ್ಥ ಹಾಳು ಮಾಡುತ್ತದೆ ಎಂದರು.

ಈ ದೇಶದ ಸ್ವತಂತ್ರ ಹೋರಾಟದಲ್ಲಿ ಆರೆಸ್ಸೆಸ್ ಪಾತ್ರವೇನು? ಆರೆಸ್ಸೆಸ್ ಈ ದೇಶದ ಯುವಜನತೆಯಲ್ಲಿ ವಿಷಬೀಜ ಬಿತ್ತುತ್ತಿದೆ. ಈ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ಅಲ್ಲಿ ಆರೆಸ್ಸೆಸ್ ಅನ್ನು ಸರಕಾರಿ ಸ್ಥಳದಲ್ಲಿ ನಿಷೇಧ ಮಾಡಿದೆ. ಪ್ರಿಯಾಂಕ್‌ ಖರ್ಗೆ ಅವರು ಬರೆದ ಪತ್ರದ ಬಗ್ಗೆ ಬಿಜೆಪಿ ಪರಿಪೂರ್ಣವಾಗಿ ಅರಿತುಕೊಂಡು ಟೀಕೆ ಮಾಡಬೇಕು ಎಂದು ಕಿಡಿಕಾಡಿದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಅವರು ಧಮ್ಮು ತಾಕತ್ತು ಇದ್ದಾರೆ ಆರೆಸ್ಸೆಸ್ ನಿಷೇದ ಮಾಡುವಂತೆ ಹೇಳಿಕೆ ನೀಡಿರುವುದಾದರೆ. 1948 ರಲ್ಲಿ ವಲ್ಲಭಬಾಯಿ ಪಟೇಲ್, ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯಲ್ಲಿ ಆರೆಸ್ಸೆಸ್ ನಿಷೇಧ ಮಾಡಿದ್ದರು. ಈ ಬಗ್ಗೆ ಆರ್.ಅಶೋಕ್‌ ಅವರು ಪರಾಮರ್ಶೆ ಮಾಡಿಕೊಳ್ಳಬೇಕೆಂದು ಎಂದು ಹೇಳಿದರು.

1969ರಲ್ಲಿ ಕೋಮು ಗಲಭೆ, 1971ರಲ್ಲಿ ತಲಿಚೇರಿ ಗೋಮು ಗಲಭೆ, 1979 ಜೆಮ್ ಶೇಡ್ ಕೋಮು ಗಲಭೆ ಹಾಗೂ 1982 ಕನ್ಯಾಕುಮಾರಿನಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ನಡೆದ ಕೋಮುಗಲಭೆಗೆ ಆರೆಸ್ಸೆಸ್ ಕಾರಣಿಭೂತಿಯಾಗಿದೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಆರೋಪಿಸಿದರು.

100 ವರ್ಷದ ಸಂಭ್ರಮದಲ್ಲಿ ಕೇವಲ ಇವರ ಸಾಧನೆ ಮಹಾತ್ಮ ಗಾಂಧಿ ಕೊಲೆ, ಬಾಬ್ರಿ ಮಸೀದಿ ಧ್ವಂಸ ಹಾಗೂ ಕೋಮುಗಲಭೆ ಸೃಷ್ಟಿಸುವುದು ಇವರ ನೂರು ವರ್ಷದ ಬಹುದೊಡ್ಡ ಸಾಧನೆಯ ಸಂಭ್ರಮ ಎಂದು ಟೀಕಿಸಿದರು.

ಈ‌ವೇಳೆ ಜಿಲ್ಲಾಧ್ಯಕ್ಷ ಬಸವರಾಜ ಪಾಟಿಲ ಇಟಗಿ, ಮಾಧ್ಯಮ ವಕ್ತಾರ ಡಾ.ರಜಾಕ್ ಉಸ್ತಾದ್, ಅಬ್ದುಲ್ ಕರೀಮ್, ಮತ್ತಿತರರು ಇದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News