×
Ad

ಬೆಂಗಳೂರಿನಿಂದ ಬೀದರ್‌ಗೆ ವಿಶೇಷ ರೈಲು ಸಂಚಾರ

Update: 2025-12-01 14:28 IST

ರಾಯಚೂರು: ಕ್ರಿಸ್ಮಸ್ ಪ್ರಯುಕ್ತ ಬೆಂಗಳೂರು ಕಂಟೋನ್ಮೆಂಟ್ - ಬೀದರ್ - ವಯಾ ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ರೈಲು ಕ್ರಿಸ್ಮಸ್ ಪ್ರಯುಕ್ತ ಸಂಚರಿಸಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಂಗಳೂರು ಕಂಟೊನ್ಮೆಂಟ್ - ಬೀದರ್ ವಿಶೇಷ ಎಕ್ಸ್ಪ್ರೆಸ್ ರೈಲು (06291) ಡಿಸೆಂಬರ್ 24ರಂದು ರಾತ್ರಿ 9:15ಕ್ಕೆ ಬೆಂಗಳೂರು ಕಂಟೊನ್ಮೆಂಟ್ ರೈಲು ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 11:30ಕ್ಕೆ ಬೀದರ್ ತಲುಪಲಿದೆ.

ಬೀದರ್ - ಬೆಂಗಳೂರು ಕಂಟೊನ್ಮೆಂಟ್ ವಿಶೇಷ ಎಕ್ಸ್ಪ್ರೆಸ್ ರೈಲು (06292) ಡಿಸೆಂಬರ್ 25ರಂದು ಮಧ್ಯಾಹ್ನ 1:00ಕ್ಕೆ ಬೀದರ್ ನಿಲ್ದಾಣದಿಂದ ನಿರ್ಗಮಿಸಿ ಮರುದಿನ ಬೆಳಗ್ಗೆ 4:00ಕ್ಕೆ ಬೆಂಗಳೂರು ಕಂಟೊನ್ಮೆಂಟ್ ಗೆ ತಲುಪಲಿದೆ.

ಯಲಹಂಕ, ಹಿಂದೂಪೂರ, ಧರ್ಮವರಂ, ಅನಂತಪುರ, ಗುಂತಕಲ್, ಆದೋನಿ, ಮಂದರಾಳ್ಯಂ ರಸ್ತೆ, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಹುಮನಬಾದ್ ರೈಲು ನಿಲ್ದಾಣದಲ್ಲಿ ಎರಡು ಕಡೆಯ ಸಂಚಾರದಲ್ಲಿ ನಿಲುಗಡೆಯಾಗಲಿವೆ.ಎರಡು ಕಡೆ ಪ್ರಯಾಣದ ಬುಕ್ಕಿಂಗ್ ವ್ಯವಸ್ಥೆ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News