ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ತೀರ್ಮಾನವನ್ನು ವರಿಷ್ಠರು ಕೈಗೊಳ್ಳುತ್ತಾರೆ : ಸಚಿವ ಸತೀಶ್ ಜಾರಕಿಹೊಳಿ
ರಾಯಚೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ತೀರ್ಮಾನವನ್ನು ಪಕ್ಷದ ವರಿಷ್ಟರು ನಿರ್ಧರಿಸುತ್ತಾರೆ ಹೊರತು ನಾವು ಚರ್ಚೆ ಮಾಡಿದರೆ ಆಗುವುದಿಲ್ಲ, ನಮ್ಮ ಸ್ಥಾನ ಉಳಿದರೆ ಸಾಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದೆ. ಜನರಿಗೆ ಯೋಜನೆಗಳು ತಲುಪುತ್ತಿವೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ವಿಶ್ವನಾಥ ಹೇಳಿಕೆಯ ಬಗ್ಗೆ ಕೇಳಿದಾಗ, ಅವರು ನಮ್ಮ ಪಕ್ಷದವರೇ ಅಲ್ಲ. ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಲು ಅವರು ಯಾರು ಎಂದು ಪ್ರಶ್ನಿಸಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುತ್ತಾರೆ ಇಲ್ಲವೋ ಎನ್ನವುದನ್ನು ಅವರೇ ಹೇಳಬೇಕು. ಯಾರಾರು ಮಾತನಾಡಿದರೆ ಬದಲಾಗದು ಎಂದು ಹೇಳಿದರು.
ಜಾತಿ ಸಮೀಕ್ಷೆ ಬಗ್ಗೆ ಕೇಳಿದಾಗ, ವಿವಿಧ ಸಮೂದಾಯಗಳ ಆಕ್ಷೇಪದ ಹಿನ್ನಲೆಯಲ್ಲಿ ಮರು ಸಮೀಕ್ಷೆಗೆ ಪಕ್ಷದ ವರಿಷ್ಟರು ಸೂಚಿಸಿದ್ದಾರೆ. ಈ ಹಿಂದೆ 160 ಕೋಟಿ ರೂ. ವ್ಯಯವಾಗಿದೆ. ಆದರೆ ಏಳು ಕೋಟಿ ಜನರ ಅಭಿಪ್ರಾಯವನ್ನು ಗೌರವಿಸುವದು ಮುಖ್ಯವಾಗುತ್ತದೆ. ಮರು ಸಮೀಕ್ಷೆ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅನುದಾನ ಕೊರತೆಯಿಲ್ಲ. ರಾಜ್ಯದಲ್ಲಿ 50 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ 30 ಪೂರ್ಣಗೊಂಡಿವೆ. 20 ಪ್ರಗತಿಯ ಹಂತದಲ್ಲಿವೆ. ರಾಯಚೂರಿನಲ್ಲಿ ರಿಂಗ್ ರೋಡ್ ನಿರ್ಮಾಣ ಮಾಡುವ ಪ್ರಸ್ತಾವನೆಯಿದೆ. ಇಲಾಖೆ ಹಂತದಲ್ಲಿ ಪರಿಶೀಲಿಸಿ ನಿರ್ಧರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ, ಸಂಸದ ಜಿ.ಕುಮಾರನಾಯಕ, ಮುಹಮ್ಮದ್ ಶಾಲಂ ಇದ್ದರು