ʼಆಪರೇಷನ್ ಸಿಂಧೂರʼ ಬೆಂಬಲಿಸಿ ರಾಯಚೂರಿನಲ್ಲಿ ಬೃಹತ್ ತಿರಂಗ ಯಾತ್ರೆ
ರಾಯಚೂರು: ಪಾಕಿಸ್ತಾನ ವಿರುದ್ಧದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ‘ರಾಷ್ಟ್ರೀಯ ಭದ್ರತೆಗಾಗಿ ನಾಗರಿಕರು’ ಎಂಬ ಧ್ಯೇಯದೊಂದಿಗೆ ಶನಿವಾರ ರಾಷ್ಟ್ರ ರಕ್ಷಣೆಗಾಗಿ ನಾಗರಿಕ ಸಮಿತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಬೃಹತ್ ತಿರಂಗಾ ಯಾತ್ರೆ ಮಾಡಲಾಯಿತು.
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಪ್ರಾರಂಭವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಹಾನಗರ ಪಾಲಿಕೆ, ತೀನ್‌ಕಂದಿಲ್ ವೃತ್ತ, ನೇತಾಜಿ ವೃತ್ತ, ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದ ವರೆಗೆ ನಡೆದ ತಿರಂಗಾ ಯಾತ್ರೆಯಲ್ಲಿ ನಿವೃತ್ತ ಯೋಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಾಗರಿಕರು, ಬಿಜೆಪಿ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ತ್ರಿವರ್ಣ ಧ್ವಜವನ್ನು ಹಿಡಿದು ಏನೇ ಬರಲಿ ಒಗ್ಗಟಿರಲಿ, ಬೋಲೋ ಭಾರತ್ ಮಾತಕೀ ಜೈ, ಜೈ ಹಿಂದ್, ವಂದೇ ಮಾತಂ, ಜೈವಾನ್ ಜೈ ಕಿಸಾನ್, ಪಾಕಿಸ್ತಾನಕ್ಕೆ ಪಾಠ ಕಲಿಸಿದ ದೇಶ ಭಕ್ತ ಸೈನಿಕರಿಗೆ ಜೈ ಎಂಬ ಘೋಷಣೆಗಳನ್ನು ಕೂಗಿದರು.
ಕಿಲ್ಲೇಬೃಹ್ಮನಠದ ಶಾಂತಮಲ್ಲ ಶಿವಾಚಾರ್ಯ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ, ಶಾಸಕ ಶಿವರಾಜ ಪಾಟೀಲ, ಮಾಜಿ ಸಂಸದ ಬಿ. ವಿ. ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಪಾಟೀಲ ಲೆಕ್ಕಿಹಾಳ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಶಂಕರಪ್ಪ, ರಾಷ್ಟ್ರ ರಕ್ಷಣಾ ಸಮಿತಿಯ ಸಂಚಾಲಕ ಶಿವಬಸಪ್ಪ ಪಾಟೀಲ, ರವೀಂದ್ರ ಜಲ್ದಾರ, ಶಂಕರರೆಡ್ಡಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.