ಬೆಂಗಳೂರು-ಹುಬ್ಬಳ್ಳಿ-ಸಿಂಧನೂರು ರೈಲು ಸೇವೆಗೆ ವಿ.ಸೋಮಣ್ಣ ಚಾಲನೆ
ರಾಯಚೂರು : ಬೆಂಗಳೂರು-ಹುಬ್ಬಳ್ಳಿ-ಸಿಂಧನೂರುವರೆಗೆ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ಶನಿವಾರ ಜಿಲ್ಲೆಯ ಸಿಂಧನೂರಿನ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.
ಈ ವೇಳೆ ವಿ.ಸೋಮಣ್ಣ ಮಾತನಾಡಿ, ಜನತೆಗೆ ಉತ್ತಮ ಸಂಪರ್ಕ ಸೌಲಭ್ಯ ನೀಡುವ ಉದ್ದೇಶದಿಂದ ರೈಲ್ವೆ ಇಲಾಖೆ ಸಿಂಧನೂರಿಗೆ ಹೊಸದಾಗಿ ವಿಶೇಷ ರೈಲು ಸೇವೆ ಪ್ರಾರಂಭಿಸಿದೆ. ಈಗಾಗಲೇ ಸಿಂಧನೂರಿನಿಂದ ಹುಬ್ಬಳ್ಳಿ ಕಡೆಗೆ ಪ್ರತಿದಿನ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲು (ಸಂಖ್ಯೆ 56927/56928) ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಜನರು ರೈಲು ಸೇವೆಯಿಂದ ಸಂತುಷ್ಟರಾಗಿದ್ದಾರೆ ಈಗ ಹೊಸದಾಗಿ ಹುಬ್ಬಳ್ಳಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17391/17392) ಸೇವೆಯನ್ನು ಸಿಂಧನೂರಿನವರೆಗೆ ವಿಸ್ತರಿಸಿ ಈ ಭಾಗದ ಜನರ ನಿರೀಕ್ಷೆಯನ್ನು ಪೂರೈಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಕೆ.ರಾಜಶೇಖರ ಹಿಟ್ನಾಳ, ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ಮಾನಪ್ಪ ಡಿ.ವಜ್ಜಲ್, ಡಾ.ಶಿವರಾಜ ಎಸ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಬಸನಗೌಡ ಬಾದರ್ಲಿ, ಮಾಜಿ ಸಂಸದ ವಿರುಪಾಕ್ಷಪ್ಪ, ಮಾಜಿ ಸಚಿವ ನಾಡಗೌಡ ವೆಂಕಟರಾವ್, ಬೇಲಾ ಮೀನಾ, ಎಸ್.ಪಿ.ಶಾಸ್ತ್ರೀ, ಡಾ ಅನೂಪ ದಯಾನಂದ ಸಾಧು, ಟಿ.ವಿ.ಭೂಷಣ, ಸಂತೋಷ್ ಹೆಗಡೆ , ಸಂಜಯ ಕುಮಾರ, ಅರವಿಂದ ಹರ್ಲೆ, ಅಲೋಕ್ ಕುಮಾರ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.