ಶಿವಮೊಗ್ಗ | ವಿಷ ಸೇವಿಸಿದ್ದ ನೌಕರ ಮೃತ್ಯು
Update: 2025-08-04 22:57 IST
ಶಿವಮೊಗ್ಗ: ಇಲಾಖೆಯ ನೋಟಿಸ್‌ಗೆ ಹೆದರಿ ವಿಷ ಸೇವಿಸಿದ್ದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಅಡುಗೆ ನೌಕರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಸುರೇಶ್ ಮೃತಪಟ್ಟ ಅಡುಗೆ ನೌಕರ. ಅನಧಿಕೃತ 10 ದಿನಗಳ ರಜೆ ಮೇಲೆ ಹೋಗಿದ್ದ ಸುರೇಶ್ ಗೆ ನೋಟಿಸ್ ನೀಡುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲೇ ವಿಷ ಸೇವಿಸಿ ಸಹಾಯಕ ನಿರ್ದೇಶಕರ ಕಚೇರಿಗೆ ಬಂದಿದ್ದ. ಇದರಿಂದ ಸುರೇಶ್ ಅಸ್ವಸ್ಥನಾಗಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆ ಸೇರಿಸಲಾಗಿತ್ತು ಎನ್ನಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಸೋಮವಾರ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸುರೇಶ್ ಗಾಡಿಕೊಪ್ಪದ ಬಿಸಿಎಂ ಹಾಸ್ಟೆಲ್ ಅಡುಗೆ ಕೆಲಸಗಾರನಾಗಿದ್ದು, ಜಿಪಂ ಮುಖ್ಯ ಸಿಇಒ ಮನೆಯಲ್ಲೂ ಅಡುಗೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ