×
Ad

ಶಿವಮೊಗ್ಗ: ಬ್ಯಾಗ್​​​​​ ನಲ್ಲಿದ್ದ ಸಿಡಿಮದ್ದು ಸ್ಫೋಟ: ಇಬ್ಬರಿಗೆ ಗಾಯ

Update: 2024-02-18 15:15 IST

ಶಿವನೊಗ್ಗ: ಸಿಡಿಮದ್ದು ಸ್ಪೋಟಗೊಂಡು ಇಬ್ಬರಿಗೆ ವ್ಯಕ್ತಿಗಳಿಗೆ ಗಾಯಗಳಾದ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಇಂದು ನಡೆದಿದೆ.

ಹಾವೇರಿಯ ಕುಟುಂಬವೊಂದು ಸಂತೆಗಾಗಿ ಬಂದಿದ್ದ ಸಂದರ್ಭದಲ್ಲಿ ಅವರು ಸಿಡಿಮದ್ದು ತಂದಿದ್ದರು. ಸಂತೆಯ ವೇಳೆ ಸಿಡಿಮದ್ದನ್ನು ಅಂಗಡಿ ಬಳಿ ಇಟ್ಟಿದ್ದ ಅವರು, ಈ ವೇಳೆ ಸಿಡಿಮದ್ದು ಏಕಾಏಕಿ ಸ್ಫೋಟಗೊಂಡಿದೆ ಎನ್ನಲಾಗಿದೆ.

ಹಾವೇರಿಯ ಉಮೇಶ್ ಹಾಗೂ ರೂಪ ದಂಪತಿ ತಂದಿದ್ದ ಬ್ಯಾಗ್ ನಲ್ಲಿ ಕಾಡುಪ್ರಾಣಿಗಳ ಭೇಟೆಗೆ ಬಳಸುವ ಸಿಡಿಮದ್ದು ತಂದಿದ್ದರು. ಈ ಘಟನೆ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಪೋಟಗೊಂಡ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಹಂದಿಗೆ ಇಡಲು ತಂದಿದ್ದ ಸಿಡಿಮದ್ದು ಸ್ಪೋಟಗೊಂಡಿದೆ. ಶಿರಾಳಕೊಪ್ಪ ಸಂತೆಗೆ ಆಗಮಿಸಿದ್ದ ಉಮೇಶ್‌ ಮತ್ತು ರೂಪ ದಂಪತಿ ಬೆಡ್‌ ಶೀಟ್‌ ಖರೀದಿಸಿದ್ದರು. ಸಂತೆಯಲ್ಲಿದ್ದ ಅಂಗಡಿಯೊಂದರ ಮಾಲೀಕ ದಂಪತಿಗೆ ಪರಿಚಯವಿದ್ದ. ಈ ಹಿನ್ನೆಲೆ ತಮ್ಮ ಬಳಿ ಇದ್ದ ಬ್ಯಾಗನ್ನು ಅಂಗಡಿಯಲ್ಲಿ ಇಟ್ಟು ಸಂತೆಗೆ ಹೋಗಿದ್ದರು. ಕೆಲವು ಹೊತ್ತಿನ ಬಳಿಕ ಬ್ಯಾಗಿನಲ್ಲಿದ್ದ ವಸ್ತು ಸ್ಪೋಟಗೊಂಡಿದೆ. ಆರೋಪಿಗಳ ಕುರಿತು ಮಾಹಿತಿ ಲಭ್ಯವಾಗಿದ್ದು ಅವರ ವಿಚಾರಣೆ ಮಾಡಲಾಗುತ್ತದೆ. ಇನ್ನು ಗಾಯಾಳುವಿಗೆ ಚಿಕಿತ್ಸೆ ನೀಡಲಾಗಿದೆ.

ಜಿ.ಕೆ ಮಿಥುನ್ ಕುಮಾರ್, ಎಸ್ಪಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News