×
Ad

ಶಿವಮೊಗ್ಗ: ಪ್ಯಾರಾಚೂಟ್‌ ವೈಫಲ್ಯದಿಂದ ವಾಯು ಪಡೆಯ ಅಧಿಕಾರಿ ಮೃತ್ಯು; ತವರಿಗೆ ತಲುಪಿದ ಪಾರ್ಥಿವ ಶರೀರ

Update: 2025-02-09 10:00 IST

ಶಿವಮೊಗ್ಗ: ತರಬೇತಿ ವೇಳೆ ಪ್ಯಾರಾಚೂಟ್‌ ತೆರೆಯದೆ ಆಗಸದಿಂದ ಕೆಳಗೆ ಬಿದ್ದು ಹುತಾತ್ಮರಾದ ವಾಯುಪಡೆ ವಾರಂಟ್‌ ಆಫೀಸರ್‌ ಜಿ.ಎಸ್‌.ಮಂಜುನಾಥ್‌ ಅವರ ಪಾರ್ಥಿವ ಶರೀರ ಶಿವಮೊಗ್ಗ ತಲುಪಿದೆ.

ನಗರದ ಹೊಳೆ ಬಸ್‌ ನಿಲ್ದಾಣದ ಸಮೀಪ ಬೆಕ್ಕಿನ ಕಲ್ಮಠದ ಬಳಿ ಜನಪ್ರತಿನಿಧಿಗಳು,ಶಿವಮೊಗ್ಗದ  ನಾಗರಿಕರು ಮಂಜುನಾಥ್‌ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಶಿವಮೊಗ್ಗದಲ್ಲಿ ಅಂತಿಮ ನಮನ ಸಲ್ಲಿಸುವ ಸಂದರ್ಭ ವಾರಂಟ್‌ ಆಫೀಸರ್‌ ಜಿ.ಎಸ್.ಮಂಜುನಾಥ್‌ ಅವರ ಪತ್ನಿ ಕಲ್ಪಿತಾ ಸಾಕಿಯ,ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರಂಟ್‌ ಆಫೀಸರ್‌ ಜಿ.ಎಸ್.ಮಂಜುನಾಥ್‌ ಅವರ ಪಾರ್ಥೀವ ಶರೀರವನ್ನು ಸೇನಾ ವಾಹನದಲ್ಲಿ ತರಲಾಗಿದೆ. ಈ ಸಂದರ್ಭ ವಾಯುಪಡೆಯ ಅಧಿಕಾರಿಗಳು, ಜಿ.ಎಸ್‌.ಮಂಜುನಾಥ್‌ ಅವರ ಕುಟುಂಬ ಸದಸ್ಯರು ಜೊತೆಗಿದ್ದರು. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News