ಶಿವಮೊಗ್ಗ: ವಿಚಾರಣಾಧೀನ ಕೈದಿಗೆ ಮಾದಕ ವಸ್ತು ನೀಡಲು ಬಂದಿದ್ದ ಇಬ್ಬರು ವಶಕ್ಕೆ
Update: 2025-10-13 23:24 IST
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಬಿಸ್ಕೇಟ್ ಪ್ಯಾಕೆಟ್‌ನಲ್ಲಿ ಗೋಪ್ಯವಾಗಿ ಗಾಂಜಾ, ಸಿಗರೇಟ್ ಇರಿಸಿ ವಿಚಾರಣಾಧೀನ ಕೈದಿಗೆ ನೀಡಲು ಬಂದಿದ್ದ ಇಬ್ಬರನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ವಿಚಾರಣಾಧೀನ ಕೈದಿ ಮುಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನನ್ನು ಮಾತನಾಡಿಸಲು ಭದ್ರಾವತಿ ನಿವಾಸಿಗಳಾದ ರಾಹಿಲ್ (19) ಮತ್ತು ತಸೀರುಲ್ಲಾ (19) ಎಂಬವರು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಮುಹಮ್ಮದ್ ಗೌಸ್‌ಗೆ ನೀಡಲು ಮೂರು ಪ್ಯಾಕೆಟ್ ಬಿಸ್ಕೆಟ್ ತಂದಿದ್ದರು.
ಜೈಲು ಭದ್ರತೆಗೆ ನಿಯೋಜಿಸಿದ್ದ ಕೆಎಸ್‌ಐಎಸ್‌ಎಫ್ ಪಡೆ ಸಿಬ್ಬಂದಿ ಬಿಸ್ಕೇಟ್ ಪ್ಯಾಕೆಟ್ ಪರಿಶೀಲಿಸಿದಾಗ ಒಳಗೆ ಗಮ್ ಟೇಪ್‌ನಲ್ಲಿ ಸುತ್ತಿದ್ದ ವಸ್ತುಗಳು ಸಿಕ್ಕಿವೆ. ಪರಿಶೀಲಿಸಿದಾಗ ಒಂದು ಪ್ಯಾಕೆಟ್‌ನಲ್ಲಿ ಗಾಂಜಾ, ಮತ್ತೊಂದರಲ್ಲಿ ಸಿಗರೇಟ್‌ಗಳು ಲಭ್ಯವಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.